ಉಡುಪಿ: ದಿನಾಂಕ:08-02-2024(ಹಾಯ್ ಉಡುಪಿ ನ್ಯೂಸ್) ಗಂಡನಿಂದ ಮಾನಸಿಕ ದೈಹಿಕ ಹಲ್ಲೆ ಗೊಳಗಾಗಿರುವ ಮಹಿಳೆ ಯೋರ್ವರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉಡುಪಿ, ಮೂಡುತೋನ್ಸೆ ಗ್ರಾಮದ ನಿವಾಸಿ ಸ್ವರೂಪ (37) ಎಂಬವರು ಜೀವನ್ ಎಂಬುವವರೊಂದಿಗೆ ದಿನಾಂಕ 29/10/2012 ರಂದು ಮದುವೆ ಆಗಿದ್ದು, ಮದುವೆ ಆದ ನಂತರ ಸ್ವರೂಪಾರವರು ಜೀವನ್ ನೊಂದಿಗೆ ಬೆಂಗಳೂರು, ಮಂಗಳೂರು ಹಾಗೂ ಉಡುಪಿ ಕಲ್ಯಾಣಪುರದಲ್ಲಿ ಸಾಂಸಾರಿಕ ಜೀವನ ಮಾಡಿಕೊಂಡಿರುತ್ತಾರೆ ಎಂದಿದ್ದಾರೆ.
ಮದುವೆ ಆದ ನಂತರ 2 ತಿಂಗಳು ಆಪಾದಿತ ಜೀವನ್ ಸ್ವರೂಪರನ್ನು ಒಳ್ಳೆಯ ರೀತಿಯಲ್ಲಿ ನೋಡಿಕೊಂಡಿದ್ದು, ನಂತರದ ದಿನಗಳಲ್ಲಿ ಸ್ವರೂಪರಿಗೆ ಸಣ್ಣ ಪುಟ್ಟ ವಿಚಾರಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದು, ಅಲ್ಲದೇ ಗಂಡ ಜೀವನ್ ನು ಸ್ವರೂಪರವರ ತಾಯಿ ಮನೆಯ ಬಳಿ ಬಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ ಎಂದು ಸ್ವರೂಪರವರು ಪೊಲೀಸರಿಗೆ ದೂರು ನೀಡಿದ್ದಾರೆ .
ಸ್ವರೂಪ ರವರು ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 498(A), 323, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ .