Spread the love

ಗಂಗೊಳ್ಳಿ: ದಿನಾಂಕ 07/02/2024(ಹಾಯ್ ಉಡುಪಿ ನ್ಯೂಸ್) ಗೇರುಹಾಡಿಯ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದ ವರನ್ನು ಗಂಗೊಳ್ಳಿ ಪೊಲೀಸ್ ಠಾಣೆಯ  ಪೊಲೀಸ್‌ ಉಪನಿರೀಕ್ಷಕರಾದ ಹರೀಶ್ ಆರ್ ಅವರು ಬಂಧಿಸಿದ್ದಾರೆ.

ಗಂಗೊಳ್ಳಿ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಹರೀಶ್ ಆರ್ ಅವರು ದಿನಾಂಕ :05-02-2024 ರಂದು ಸಿಬ್ಬಂದಿಯವರೊಂದಿಗೆ  ರೌಂಡ್ಸ್ ಕರ್ತವ್ಯದಲ್ಲಿರುವಾಗ ಗೇರು ಹಾಡಿಯ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಯಾವುದೋ ಜುಗಾರಿ ಆಡುತ್ತಿರುವುದಾಗಿ ದೊರೆತ ಮಾಹಿತಿ ಮೇರೆಗೆ ಕೂಡಲೇ ದಾಳಿ ನಡೆಸಿ  ಗರಗಲ ಮಂಡಲ ರೀತಿಯಲ್ಲಿ  ಜುಗಾರಿ ಆಟ ನಡೆಸುತ್ತಿದ್ದ ಪ್ರಕಾಶ ಎಂಬಾತನನ್ನು ಬಂಧಿಸಿ ಆತನಿಂದ ಗರಗರ ಮಂಡಲ ಜುಗಾರಿ ಆಡಲು ಉಪಯೋಗಿಸಿದ ನಗದು ಹಣ 1260/-,  ನಂಬರ್ ಬರೆದ ಪ್ಲಾಸ್ಟಿಕ್ ಶೀಟ್, ನಂಬರ್ ಬರೆದ ದಾಳಗಳು ,  ಮೇಣದ ಬತ್ತಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಕಲಂ:78(I),78(III) ಕರ್ನಾಟಕ ಪೊಲೀಸ್ ಕಾಯ್ದೆ 2021 ರಂತೆ ಪ್ರಕರಣ ದಾಖಲಾಗಿದೆ.

error: No Copying!