Spread the love

ಹೆಮ್ಮಾಡಿ ಕಟ್ಟು, ಹೂವಿನ ಪೂಜೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ
ಶ್ರೀ ಕುಪ್ಪಣ್ಣ ಹೈ ಗೂಳಿ ಜಟ್ಟಿಗ ಹಾಗೂ ಸಹ ಪರಿವಾರ ದೇವಸ್ಥಾನ ಕಟ್ಟು ಸುಳ್ಸೆ ಇದರ ಬ್ರಹ್ಮ ಕುಂಭಾಭಿಷೇಕ ಹಾಗೂ ವಾರ್ಷಿಕ ಹೂವಿನ ಪೂಜೆ ಪ್ರಯುಕ್ತ ಪ್ರಶಸ್ತಿ ಪ್ರಧಾನ ಸಮಾರಂಭವು ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸುಬ್ಬು ಎಸ್ ಶ್ರೀಯಾನ್ರವರ ಅಧ್ಯಕ್ಷತೆಯಲ್ಲಿ ಜರಗಿತು
ಈ ವರ್ಷದ ಪ್ರಶಸ್ತಿಯನ್ನು ಸಮಾಜ ಜೀವ ರಕ್ಷಕ ಆಪದ್ಬಾಂಧವ ಜನರಿಂದ ಕರೆಯಲ್ಪಡುವ ಈಶ್ವರ್ ಮಲ್ಪೆ ಅವರಿಗೆ ನೀಡಿ ಗೌರವಿಸಲಾಯಿತು
ಮುಖ್ಯ ಅತಿಥಿಗಳಾಗಿ ಶ್ರೀ ಗೋಪಾಲಕೃಷ್ಣ ಮಹಾ ಗಣಪತಿ ದೇವಸ್ಥಾನ ಕಟ್ಟು ಹೆಮ್ಮಾಡಿ ಇದರ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಉದಯ ಡಿ ಚಂದನ್ ಆನಂದ್ ಪಿ ಎಚ್ ದೊಡ್ಮನೆ ಹಾಗೂ ಶ್ರೀಮತಿ ಗಿರಿಜಾ ಮೊಗವೀರ ಕಳಿನ ಮನೆ ಆಗಮಿಸಿ ಶುಭ ಹಾರೈಸಿದರು ಈ ಸಂದರ್ಭದಲ್ಲಿ ಅನ್ನದಾನ ಮತ್ತು ಯಕ್ಷಗಾನ ಸೇವಾಕರ್ತರಿಗೆ ಗೌರವ ಸನ್ಮಾನ ಮಾಡಲಾಯಿತು
ಕಟ್ಟು ಮತ್ತು ಸುಳ್ಸೆ ಗ್ರಾಮದಲ್ಲಿ
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು
ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಶ್ರೀ ಸಂತೋಷ್ ಆರ್ ಎಂ ಶ್ರೀ ಸುಧೀರ್ ಏನ್ ಪೂಜಾರಿ ಉಪಸ್ಥಿತರಿದ್ದರು ಶ್ರೀ ರಘುರಾಮ್ ಹೆಚ್ ಸಿ ರವರು ಸನ್ಮಾನಿತರ ಪರಿಚಯವನ್ನು ,ಶ್ರೀ ಜಗದೀಶ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು.

error: No Copying!