ಉಡುಪಿ: ದಿನಾಂಕ:01-02-2024(ಹಾಯ್ ಉಡುಪಿ ನ್ಯೂಸ್)
ಕ್ರಷ್ಣ ನಗರಿ ಉಡುಪಿಯ ವಿಶೇಷ ಆಕರ್ಷಣೆಯಾದ ಹುಲಿವೇಷಕ್ಕೆಂದೇ ತನ್ನ ಜೀವನವನ್ನು ಮುಡುಪಾಗಿಟ್ಟು ಉಡುಪಿ ಯ ಕಾಡುಬೆಟ್ಟು ಎಂಬಲ್ಲಿ ಹುಲಿವೇಷ ತಂಡ ಕಟ್ಟಿಕೊಂಡು ರಾಜ್ಯದಾದ್ಯಂತ ಖ್ಯಾತರಾಗಿದ್ದ ಕಾಡುಬೆಟ್ಟು ಹುಲಿ ಎಂದೇ ಗುರುತಿಸಲ್ಪಡುತ್ತಿದ್ದ ಅಶೋಕ್ ರಾಜ್ ಕಾಡುಬೆಟ್ಟು ಅವರು ಇಂದು ಸಂಜೆ ಕೊನೆ ಉಸಿರೆಳೆದರು.
ಕಳೆದ ಹಲವಾರು ತಿಂಗಳುಗಳಿಂದ ಮೆದುಳು ನಿಷ್ಕ್ರಿಯಗೊಂಡು ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಸಂಜೆ ಸ್ವಗ್ರಹದಲ್ಲಿ ಕೊನೆಯದಾಗಿ ಕಣ್ಣು ಮುಚ್ಚಿದರು.