ಹಿರಿಯಡ್ಕ: ದಿನಾಂಕ:01-02-2024 (ಹಾಯ್ ಉಡುಪಿ ನ್ಯೂಸ್) ಗ್ರಾಮ ಪಂಚಾಯತ್ ನ ಕಂಪೌಂಡನ್ನು ಯಾರೋ ದುಷ್ಕರ್ಮಿಗಳು ಕೆಡವಿದ್ದಾರೆ ಎಂದು ಪಂಚಾಯತ್ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪೆರ್ಡೂರು ಗ್ರಾಮ ಪಂಚಾಯತ್ ಕಚೇರಿಯ ಬಳಿಯಲ್ಲಿ 2017-18 ನೇ ಸಾಲಿನಲ್ಲಿ 14 ನೇ ಹಣಕಾಸು ಯೋಜನೆಯ ಅನುದಾನದಡಿ ಕೊಳಚೆ ನೀರಿನ ಚರಂಡಿಗೆ ಕಲ್ಲುಕಟ್ಟಿ ಕಂಪೌಂಡ್ ರಚನೆಯನ್ನು ರೂಪಾಯಿ 99396.00 ವೆಚ್ಚ ಭರಿಸಿ ನಿರ್ಮಿಸಲಾಗಿರುತ್ತದೆ ಎನ್ನಲಾಗಿದೆ.
ದಿನಾಂಕ:30.01.2024ರ ಸಾಯಂಕಾಲ 6.30 ನಂತರದ ಅವಧಿಯಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಈ ಕಂಪೌಂಡನ್ನು ಕೆಡವಿರುತ್ತಾರೆ ಎಂದು ಪೆರ್ಡೂರು ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿ ಸುಮನ ಕೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ : 427 ಐಪಿಸಿ ಮತ್ತು ಕಲಂ: 3 Prevention of Damage to Public Property Act 1984 ರಂತೆ ಪ್ರಕರಣ ದಾಖಲಾಗಿದೆ.