ಮಣಿಪಾಲ: ದಿನಾಂಕ 01/02/2024 (ಹಾಯ್ ಉಡುಪಿ ನ್ಯೂಸ್) ಪೆರಂಪಳ್ಳಿ ಪರಿಸರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯಪಾನಕ್ಕೆ ಅವಕಾಶ ಒದಗಿಸುತ್ತಿದ್ದ ಜನರಲ್ ಸ್ಟೋರ್ ಮಾಲೀಕನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಪೆರಂಪಳ್ಳಿಯ ಸ್ಟೇನಿ ಡಿಸೋಜ ಎಂಬವರು ತನ್ನ ವೆಲಂಕಣಿ ಜನರಲ್ ಸ್ಟೋರ್ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವಿಸಲು ಅನುಮತಿ ಇಲ್ಲದೇ ಇದ್ದರೂ ಸಹ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಸಾರ್ವಜನಿಕ ದೂರು ಬಂದ ಕಾರಣ ಮಣಿಪಾಲ ಪೊಲೀಸರು ಸ್ಟೇನಿ ಡಿಸೋಜ ಎಂಬವರನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ .
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 15 (A) Karnataka Excise Act ರಂತೆ ಪ್ರಕರಣ ದಾಖಲಾಗಿದೆ.