ಉಡುಪಿ: ದಿನಾಂಕ 26-01-2024(ಹಾಯ್ ಉಡುಪಿ ನ್ಯೂಸ್)
ಶ್ರೀ ರಾಮ ದೇವರ ಪ್ರತಿಷ್ಠಾಪನೆಯ ದಿನದಂದು
ಬನ್ನಂಜೆ ಬಿಲ್ಲವ ಸಂಘದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ,ಇದರ ಬಗ್ಗೆ ತಿಳಿದುಕೊಳ್ಳದೆ ಸಂಘದ ಕುರಿತು ಅವಾಚ್ಯ ಪದಗಳನ್ನು ಬಳಸಿ ಬಿಲ್ಲವ ಸಮಾಜವನ್ನು ನಿಂದಿಸಿರುವುದು ಖಂಡನೀಯ.ಸರಿತಪ್ಪುಗಳನ್ನು ಅವಲೋಕಿಸದೆ ದುರುದ್ದೇಶಪೂರ್ವಕವಾಗಿ ಬಿಲ್ಲವ ಸಂಘ ಮತ್ತು ಸಮಾಜವನ್ನು ಹೀಯಾಳಿಸಿರುವುದು ಬಿಲ್ಲವರ ಸ್ವಾಭಿಮಾನದ ಪ್ರತೀಕವಾಗಿದೆ. ಇದಕ್ಕೆಲ್ಲ ಸುಮ್ಮನಿದ್ದು ಬಿಟ್ಟರೆ ನಾಳೆ ಇನ್ನೊಬ್ಬ ಬಿಲ್ಲವರು ಯಾ ಸಂಘಕ್ಕೆ ಬಾಯಿಗೆ ಬಂದಂತೆ ಮಾತನ್ನಾಡುವುದು ಮುಂದುವರಿಯುತ್ತದೆ.
ಈ ದುಷ್ಕ್ರತ್ಯ ಮಾಡಿದ ಯಾರೇ ಅನಾಮಧೇಯ ವ್ಯಕ್ತಿಯಾಗಲಿ,ಆತನ ಕುರಿತು ಕಾನೂನು ಕ್ರಮಕೈಗೊಳ್ಳುವ ಕುರಿತಾಗಿ ಬಿಲ್ಲವ ಸಮಾಜ ಬಾಂಧವರು ದಿನಾಂಕ 25-1-2024 ರಂದು ಗುರುವಾರ ಬನ್ನಂಜೆ ಬಿಲ್ಲವ ಸೇವಾ ಸಂಘದಲ್ಲಿ ನಡೆದ ಸಭೆಯಲ್ಲಿ ಆಗ್ರಹಿಸಿದ್ದಾರೆ.