Spread the love

ಮಲ್ಪೆ: ದಿನಾಂಕ: 26-01-2024 (ಹಾಯ್ ಉಡುಪಿ ನ್ಯೂಸ್) ಪಡುತೋನ್ಸೆ ನಿವಾಸಿಯೋರ್ವರು ಮನೆಯಲ್ಲಿ ಸಾಕಿದ್ದ ಮೂರು ನಾಯಿಗಳನ್ನು ಯಾರೋ ದುಷ್ಕರ್ಮಿಗಳು ವಿಷ ಹಾಕಿ ಕೊಂದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಪಡು ತೋನ್ಸೆ ನಿವಾಸಿ ಪ್ರಭಾಕರ (58) ಎಂಬವರು ತನ್ನ ಮನೆಯಲ್ಲಿ ಮೂರು ನಾಯಿಗಳನ್ನು ಸಾಕಿ ಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

, ದಿನಾಂಕ 25/01/2024 ರಂದು ಬೆಳಗ್ಗೆ 5.00 ಗಂಟೆಗೆ ಎದ್ದು ನೋಡಿದಾಗ ನಾಯಿಗಳು ಜೀವಂತವಾಗಿದ್ದು, ಬಳಿಕ ಬೆಳಗ್ಗೆ 6.00 ಗಂಟೆಯ ಹೊತ್ತಿಗೆ ಒಂದು ನಾಯಿ ಮನೆಯ ಅಂಗಳದಲ್ಲಿ ಸತ್ತು ಬಿದ್ದಿದ್ದು, ಇನ್ನೊಂದು ನಾಯಿ ನೆರೆಯ ಜಾಗದಲ್ಲಿ ಸತ್ತು ಬಿದ್ದಿದ್ದು, ಇನ್ನೊಂದು ನಾಯಿಯ ಮೃತ ಶರೀರ ನಾಪತ್ತೆಯಾಗಿದ್ದು, ಬೆಳಗ್ಗೆ 5.00 ಗಂಟೆಯಿಂದ 5.30 ಗಂಟೆಯವರೆಗೆ ಯಾರೋ ದುಷ್ಕರ್ಮಿಗಳು ತಿಂಡಿಯೊಳಗೆ ವಿಷ ಬೆರೆಸಿಟ್ಟ ಕುರುಹುಗಳು ಸಿಕ್ಕಿರುತ್ತದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ 429  ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

error: No Copying!