Spread the love

ಉಡುಪಿ: ದಿನಾಂಕ : 27-01-2024( ಹಾಯ್ ಉಡುಪಿ ನ್ಯೂಸ್) ಲೀಸ್ ಗೆಂದು ಹಣ ಪಡೆದು ಬಾಡಿಗೆ ಮನೆ ಒದಗಿಸಿ ಕೊಟ್ಟ ದಳ್ಳಾಳಿ ಗಳು ವಂಚನೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆಂದು ಶಕೀರಾ (52) ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ ಮೂಡನಿಡಂಬೂರು ಗ್ರಾಮದ ಶಕೀರಾ (52) ಎಂಬವರು ಈ ಹಿಂದೆ ಕುಕ್ಕಿಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ವಾಸಮಾಡಿಕೊಂಡಿದ್ದ ಸಮಯದಲ್ಲಿ ತನಗೆ ವಾಸಕ್ಕೆ  ಬೇರೊಂದು ಬಾಡಿಗೆ ಮನೆ ಬೇಕೆಂದು ತಮಗೆ ಪರಿಚಯವಿದ್ದ  2 ಆರೋಪಿ ಅಶ್ರಫ್ ಎಂಬವರಿಗೆ ತಿಳಿಸಿದಾಗ , ಆಶ್ರಫ್ ನು ಉಡುಪಿಯ ಮೂಡನಿಡಂಬೂರು ಗ್ರಾಮದ  ದಿ ಐಕಾನ್ ಎ ವಿಂಗ್ , ಬಿ ಬ್ಲಾಕ್  ನಲ್ಲಿನ ಫ್ಲಾಟ್ ಅನ್ನು ಶಕೀರಾ ರವರಿಗೆ ಬಾಡಿಗೆ ಮನೆಯಾಗಿ ತೋರಿಸಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮ್ಯಾಕ್ವಿನ್ ಮೊಂತೋರೊ ಎಂಬವರು  ಫ್ಲಾಟ್ ನ ಮಾಲಕರು ಎಂದು ಶಕೀರಾ ರವರಿಗೆ ನಂಬಿಸಿ ದಿನಾಂಕ 01/09/2020 ರಂದು 4,00,000/- ರೂಪಾಯಿಯನ್ನು ಪಡೆದು 5 ವರ್ಷದ ಮಟ್ಟಿಗೆ ಲೀಸ್ ಗೆ  ಕರಾರು ಮಾಡಿಕೊಂಡಿದ್ದು, ಕರಾರು ಸಮಯ ಆರೋಪಿ ಶಾಮೂನ್ ಅಹಮದ್ ಎಂಬಾತ ಸಾಕ್ಷಿಯಾಗಿ ಸಹಿ ಮಾಡಿರುತ್ತಾರೆ ಎಂದಿದ್ದಾರೆ .

ಇದೀಗ ರಿಚಾರ್ಡ್ ಫೆರ್ನಾಂಡಿಸ್ ಎಂಬುವವರು ಶಕೀರಾ ರವರಿಗೆ ಕರೆಮಾಡಿ ತಾನು ಫ್ಲಾಟ್ ನ ಮಾಲೀಕನೆಂದು ತಿಳಿಸಿ, ಕೂಡಲೇ ಮನೆ ಖಾಲಿ ಮಾಡಬೇಕೆಂದು ಬೆದರಿಕೆ ಹಾಕಿದ್ದಾರೆ ಎಂದು ಈ ಬಗ್ಗೆ ಶಕೀರಾ ರವರು ಅಶ್ರಫ್ ಗೆ ಕರೆ ಮಾಡಿ  ವಿಷಯವನ್ನು ತಿಳಿಸಿ ತಾನು ನೀಡಿದ ಹಣವನ್ನು ವಾಪಸ್ಸು ಕೇಳಿದ್ದಾರೆ ಎನ್ನಲಾಗಿದೆ ,ಅದಕ್ಕೆ ಆರೋಪಿಗಳು  ಅವಾಚ್ಯ ಶಬ್ಧಗಳಿಂದ ಬೈದು , ಜೀವ ಬೆದರಿಕೆ ಹಾಕಿರುತ್ತಾರೆ ಎಂದು ನ್ಯಾಯಾಲಯದಲ್ಲಿ ಶಕೀರಾ ದೂರು ದಾಖಲಿಸಿದ್ದಾರೆ.

ಶಕೀರಾರವರು ನ್ಯಾಯಾಲಯದಲ್ಲಿ ನೀಡಿದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ:  420, 406, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!