ಶಿರ್ವಾ: ದಿನಾಂಕ :27-01-2024(ಹಾಯ್ ಉಡುಪಿ ನ್ಯೂಸ್) ಮರಳು ಕಳ್ಳ ಸಾಗಾಣಿಕೆ ನಡೆಸುತ್ತಿದ್ದ 407 ವಾಹನ ಮತ್ತು ಚಾಲಕನನ್ನು ಶಿರ್ವ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಕ್ತಿವೇಲು ಇ ಅವರು ಬಂಧಿಸಿದ್ದಾರೆ.
ಶಿರ್ವಾ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಸಕ್ತಿವೇಲು ಇ ಅವರು ದಿನಾಂಕ 26/01/2024 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮರಳು ಕಳ್ಳ ಸಾಗಾಣಿಕೆ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ KA-20-C-4511ನೇ ನೊಂದಣಿ ಸಂಖ್ಯೆಯ 407 ಟೆಂಪೋ ಬರುತ್ತಿದ್ದು ಕೂಡಲೇ ಟೆಂಪೋವನ್ನು ರಸ್ತೆ ಬದಿ ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದಾಗ ಚಾಲಕನು ರಸ್ತೆ ಬದಿಯಲ್ಲಿಯೇ ನಿಲ್ಲಿಸಿದ್ದು ನಂತರ ಟೆಂಪೋ ಚಾಲಕನ ಹೆಸರು ಕೇಳಿದಾಗ ಪ್ರಕಾಶ್ ಎಂದು ತಿಳಿಸಿದ್ದು ಆತನಲ್ಲಿ ಟೆಂಫೊದಲ್ಲಿ ಏನಿದೇ ಎಂದು ಕೇಳಿದಾಗ ಮರಳು ಇರುವುದಾಗಿ ತಿಳಿಸಿದ್ದು ಮರಳನ್ನು ಸಾಗಾಟ ಮಾಡಲು ಇಲಾಖೆಯ ವತಿಯಿಂದ ಪರವಾನಿಗೆ ಇದೆಯೇ ಎಂದು ಕೇಳಿದಾಗ ಇಲ್ಲವೆಂದು ತಿಳಿಸಿದ್ದಾನೆ ಎನ್ನಲಾಗಿದೆ.
ಈ ಮರಳನ್ನು ಮೂಲ್ಕಿ ವರಪಾಡಿ ಎಂಬಲ್ಲಿಂದ ಕಾಲುವೆಯಲ್ಲಿದ್ದುದ್ದನ್ನು ತಾನು ಮತ್ತು ಸ್ಥಳದಲ್ಲಿಯೇ ಇದ್ದ ಪರಿಚಯ ಇಲ್ಲದ ವ್ಯಕ್ತಿ ಸೇರಿ ಟೆಂಪೋಗೆ ಲೋಡ್ ಮಾಡಿ ತಂದಿರುವುದಾಗಿ ತಿಳಿಸಿರುತ್ತಾನೆ ಎನ್ನಲಾಗಿದೆ.
ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಕಲಂ: 379 ಜೊತೆಗೆ 34 ಐಪಿಸಿ & ಕಲಂ: 66 R/W 192(A) IMV ACT ರಂತೆ ಪ್ರಕರಣ ದಾಖಲಾಗಿದೆ. ʻ