Spread the love

ಹೆಬ್ರಿ: ದಿನಾಂಕ:24-01-2024(ಹಾಯ್ ಉಡುಪಿ ನ್ಯೂಸ್) ವರಂಗ ಸಹಕಾರಿ ವ್ಯವಸಾಯಿಕ ಬ್ಯಾಂಕ್ ಗೆ ಕಳ್ಳರು ನುಗ್ಗಿ ಕಳ್ಳತನಕ್ಕೆ ಪ್ರಯತ್ನ ನಡೆಸಿದ್ದಾರೆ ಎಂದು ಹೆಬ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ದಿನಾಂಕ 20/01/2024 ರಿಂದ ದಿನಾಂಕ  22/01/2024 ರಂದು ಬೆಳಿಗ್ಗೆ ಯ ಮಧ್ಯಾವಧಿಯಲ್ಲಿ ಹೆಬ್ರಿ ತಾಲೂಕು ವರಂಗ ಗ್ರಾಮದ ವರಂಗ  ಸಹಕಾರಿ ವ್ಯವಸಾಯಿಕ ಸಂಘ(ಲಿ) ನ ಹಿಂಬದಿಯ ಕಿಟಕಿಯ ಸರಳುಗಳನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ತುಂಡರಿಸಿ ಒಳಗೆ ಹೋಗಿ ಹುಡುಕಾಡಿ ಅಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದಲ್ಲದೇ ಭದ್ರತಾ ಕೊಠಡಿಯ ಕಬ್ಬಿಣದ ಬಾಗಿಲನ್ನು ಗ್ಯಾಸ್ ಕಟರ್ ಆಯುಧವನ್ನು ಉಪಯೋಗಿಸಿ ಕಬ್ಬಿಣದ ಬಾಗಿಲಿಗೆ ಕಿಂಡಿಯನ್ನು ಕೊರೆದು ಒಳಗೆ ಹೋಗಿ ಕಳ್ಳತನಕ್ಕೆ ಯತ್ನಿಸಿ ಹೋಗಿರುತ್ತಾರೆ ಎಂದು ದೂರು ದಾಖಲಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಕಲಂ: 457, 511 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.     

error: No Copying!