ಬ್ರಹ್ಮಾವರ: ದಿನಾಂಕ:24-01-2024 (ಹಾಯ್ ಉಡುಪಿ ನ್ಯೂಸ್)
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ದಂಡಾಧಿಕಾರಿಗಳು ಇಂದು ದಿನಾಂಕ: 24/01/2024 ರಂದು ST,SC ಸಮುದಾಯದ ಸಮಸ್ಯೆಗಳ ಪರಿಹರಿಸುವ ನಿಟ್ಟಿನಲ್ಲಿ ಕುಂದುಕೊರತೆ ಸಭೆಯನ್ನು ಕರೆದಿದ್ದು ಬಡ ಜನರ ಸಮಸ್ಯೆಗಳು ಸಾವಿರ ಇರುವಾಗ ತಾಲೂಕಿನ ಬಡ ಜನರ ಗಮನಕ್ಕೆ ಬಾರದ ರೀತಿಯಲ್ಲಿ ಅಧಿಕಾರಿಗಳು ಸಹಿತ 50 ಜನರನ್ನು ಕೂರಿಸಿಕೊಂಡು ಸಭೆ ನಡೆಸಿ ಕಾಟಾಚಾರಕ್ಕೆ ಮಾಡಿ ಮುಗಿಸಿ ಸಭೆಯ ನಡವಳಿಕೆಯನ್ನು ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲು ಸಭೆ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ , ಆದ್ದರಿಂದ ಬಡ ಜನರ ಸಮಸ್ಯೆಗಳಿಗೆ ಸ್ಪಂದಿಸದ ತಾಲೂಕು ದಂಡಾಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮವಾದ) ವಿಭಾಗೀಯ ಸಂಚಾಲಕರಾದ ವಿಶ್ವನಾಥ ಬೆಳ್ಳಂಪಳ್ಳಿಯವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.