Spread the love

ಬ್ರಹ್ಮಾವರ: ದಿನಾಂಕ: 24-01-2024(ಹಾಯ್ ಉಡುಪಿ ನ್ಯೂಸ್) ಪ್ರಕರಣವೊಂದರಲ್ಲಿ ಆಪಾದಿತೆಯಾಗಿರುವ ಮಹಿಳೆಯೋರ್ವರು ದೂರುದಾರರಿಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ,ಚೇರ್ಕಾಡಿ ನಿವಾಸಿ ವಿಠಲ (39) ಎಂಬವರು ಆರೋಪಿ ವನಿತಾ ಡಿಮೆಲ್ಲೊ ಎಂಬವರ ವಿರುದ್ಧದ ಪ್ರಕರಣವೊಂದರಲ್ಲಿ ದೂರುದಾರರಾಗಿದ್ದಾರೆ ಎನ್ನಲಾಗಿದೆ.

ಇದೇ ವಿಚಾರದಲ್ಲಿ ದಿನಾಂಕ 03/12/2023 ರಂದು ಮಧ್ಯಾಹ್ನ ವಿಠಲರವರು ತನ್ನ ಮಕ್ಕಳೊಂದಿಗೆ ಚೇರ್ಕಾಡಿ ಗ್ರಾಮದ ಪೇತ್ರಿ ಬಸ್ಸ್‌ ನಿಲ್ದಾಣದ ಬಳಿ  ಹೋಗುತ್ತಿರುವಾಗ ಆರೋಪಿತೆ ವನಿತಾ ಡಿಮೆಲ್ಲೊ ಯು ವಿಠಲರವರ ಬಳಿ ಬಂದು ಅವರನ್ನು ಗದರಿಸಿ  “ನನ್ನ  ಮೇಲೆ ಹಾಕಿರುವ ಕೇಸನ್ನು ತೆಗೆಯುತ್ತೀಯಾ ಇಲ್ಲವಾ” ಎಂದು ಹೇಳಿದ್ದು, ಆಗ ವಿಠಲರವರ ಮಗಳಾದ ರಾಧಿಕಾರವರು ಆರೋಪಿತೆ ವನಿತಾ ಡಿಮೆಲ್ಲೊ ಗೆ ಯಾಕೆ ಬೈಯುತ್ತಿದ್ದೀರಿ ಎಂದು ಪ್ರಶ್ನಿಸಿದ್ದಕ್ಕೆ ಆರೋಪಿತೆ ವನಿತಾ ಡಿಮೆಲ್ಲೊ ವಿಠಲರವರ ಮೇಲೆ ಉಗುಳಿ “ ನನ್ನ ಬಳಿ ಕುಂದಾಪುರದ ಜನರಿದ್ದಾರೆ,  ನಿನ್ನನ್ನು ಕೊಲೆ ಮಾಡಿಸುತ್ತೇನೆ”  ಎಂದು ಬೆದರಿಕೆ ಹಾಕಿರುತ್ತಾಳೆ ಎಂದು ವಿಠಲರವರು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ.

ಈ ಬಗ್ಗೆ ನ್ಯಾಯಾಲಯದಿಂದ ಬಂದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಕಲಂ  195ಎ, 506 ಐಪಿಸಿ  ಯಂತೆ ಪ್ರಕರಣ ದಾಖಲಾಗಿದೆ.

error: No Copying!