ಬ್ರಹ್ಮಾವರ: ದಿನಾಂಕ :23-01-2024(ಹಾಯ್ ಉಡುಪಿ ನ್ಯೂಸ್) ಚೇರ್ಕಾಡಿ ಗ್ರಾಮದ ನಿವಾಸಿ ಯೋರ್ವರಿಗೆ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯದಂತೆ ಆರೋಪಿ ಬೆದರಿಕೆ ಹಾಕಿದ್ದಾರೆ ಎಂದು ಸಾಕ್ಷಿ ದಾರ ಪೊಲೀಸರಿಗೆ ದೂರು ನೀಡಿದ್ದಾರೆ.
ಬ್ರಹ್ಮಾವರದ ಚೇರ್ಕಾಡಿ ಗ್ರಾಮದ ನಿವಾಸಿ ಸುನಿಲ್ ಎಂಬವರು ಆರೋಪಿ ವನಿತಾ ಡಿಮೆಲ್ಲೊ ಎಂಬವರ ವಿರುದ್ಧದ ಪ್ರಕರಣವೊಂದರಲ್ಲಿ ಸಾಕ್ಷಿದಾರರಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇದೇ ವಿಚಾರದಲ್ಲಿ ದಿನಾಂಕ 03/12/2023 ರಂದು ಬೆಳಿಗ್ಗೆ ಸುನಿಲ್ ರವರು ಚೇರ್ಕಾಡಿ ಗ್ರಾಮದ ಪೇತ್ರಿ ಚರ್ಚ್ ಬಳಿ ಹೋಗುತ್ತಿರುವಾಗ ಆರೋಪಿ ವನಿತಾ ಡಿಮೆಲ್ಲೊ ಬೆದರಿಕೆ ಹಾಕಿರುತ್ತಾರೆ ಎಂದು ಸುನಿಲ್ ರವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 195ಎ, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.