ಮಂಗಳೂರು: ದಿನಾಂಕ:23-01-2024(ಹಾಯ್ ಉಡುಪಿ ನ್ಯೂಸ್) ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಭೀಮ ವಾದ ರಾಜ್ಯ ಸಮಿತಿಯವರ ವತಿಯಿಂದ ದಿನಾಂಕ:26-01-2024ರಂದು ಬೆಳಿಗ್ಗೆ 10-30ಕ್ಕೆ ಮಂಗಳೂರಿನ ತಾಲೂಕು ಕಛೇರಿಯ (ಮಿನಿ ವಿಧಾನಸೌಧ) ಹಿಂದಿರುವ ರಾಜ್ಯ ಸರಕಾರಿ ಗ್ರೂಪ್ ಡಿ ನೌಕರರ ಸಂಘದ ಕಛೇರಿಯಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ವನ್ನು ಏರ್ಪಡಿಸಲಾಗಿದೆ, ಮತ್ತು ನಂತರದಲ್ಲಿ ಸರ್ವ ಸದಸ್ಯರ ಸಮಾಲೋಚನಾ ಸಭೆ ಕೂಡಾ ಏರ್ಪಡಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಭೀಮ ಬಂಧುಗಳು ಮತ್ತು ದಲಿತ ಸಂಘಟನೆ ಸಮಿತಿ ಭೀಮವಾದದ ಅಭಿಮಾನಿಗಳು ತಪ್ಪದೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸ ಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಭೀಮ ವಾದ ವಿಭಾಗೀಯ ಸಂಚಾಲಕರಾದ ವಿಶ್ವನಾಥ ಬೆಳ್ಳಂಪಳ್ಳಿ ಯವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.