ಬ್ರಹ್ಮಾವರ: ದಿನಾಂಕ 22/01/2024 (ಹಾಯ್ ಉಡುಪಿ ನ್ಯೂಸ್) ಕುಮ್ರಗೋಡು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಮೂವರನ್ನು ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪುಷ್ಪ ಅವರು ಬಂಧಿಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ,(ತನಿಖೆ) ಪುಷ್ಪ ಅವರಿಗೆ ದಿನಾಂಕ:21-01-2024ರಂದು ಕುಮ್ರಗೊಡು ಗ್ರಾಮದ ಸಾರ್ವಜನಿಕ ಸ್ಧಳದಲ್ಲಿ ಹಣವನ್ನು ಪಣವನ್ನಾಗಿರಿಸಿ ಕೋಳಿ ಅಂಕ ಆಟ ನಡೆಸುತಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರಿಂದ ದೊರೆತ ಖಚಿತ ಮಾಹಿತಿ ಮೇರೆಗೆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿ ಪೊಲೀಸ್ ಸಿಬ್ಬಂದಿಯವರ ಸಹಾಯದಿಂದ ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ಆರೋಪಿಗಳಾದ 1. ಪ್ರಸಾದ ಕುಮಾರ್ 2. ಆರೋನ್ 3. ಸಂತೋಷ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ .
ಕೋಳಿ ಅಂಕಕ್ಕೆ ಬಳಸಿದ ಪೆಟ್ಟಾದ ಒಂದು ಕೋಳಿ ಮತ್ತು ಕೋಳಿ ಅಂಕ ಜುಗಾರಿ ಆಟಕ್ಕೆ ಬಂದು ಪೊಲೀಸರನ್ನು ಕಂಡು ಓಡಿಹೋದವರು ಸ್ಥಳದಲ್ಲಿ ಬಿಟ್ಟು ಹೋಗಿರುವ 7 ಮೋಟಾರು ಸೈಕಲ್ ಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 87, 93 KP Act & 11(1A) Animal Cruelty Act ರಂತೆ ಪ್ರಕರಣ ದಾಖಲಾಗಿದೆ.