ಭಾರತದ ರಾಜಕೀಯ ಮತ್ತು ಧಾರ್ಮಿಕ ನಡೆಯನ್ನು ವಿಶ್ವ ಗಮನಿಸುತ್ತಿದೆ ಎಂಬ ಅರಿವಿರಲಿ……
ಭಾರತಕ್ಕೆ ಮಿತ್ರರು ಇದ್ದಾರೆ, ವಿರೋಧಿಗಳು ಇದ್ದಾರೆ, ಶತ್ರುಗಳು ಇದ್ದಾರೆ, ವಿನಾಶಕಾರಿ ಭಯೋತ್ಪಾದಕರು ಇದ್ದಾರೆ ಎಂಬುದು ನೆನಪಿರಲಿ….
ಈ ಉನ್ಮಾದದಲ್ಲಿ ಭಾಗಿಯಾಗಲು ಇಷ್ಟವಿಲ್ಲ. ಆದರೆ ಬಹುತೇಕ ಜನರ ಸಂಭ್ರಮಕ್ಕೆ ಅಭಿನಂದನೆಗಳು…..
ಇತಿಹಾಸ ಏನೇ ಇರಲಿ, ಕಾರಣಗಳು ಏನೇ ಇರಲಿ, ರಾಮ ಮಂದಿರ ಧ್ವಂಸ ಮಾಡಿದಾಗ ಧಾರ್ಮಿಕ ಹಿಂದೂಗಳ ಭಾವನೆಗಳಗೆ ಧಕ್ಕೆಯಾದಂತೆ ಬಾಬರಿ ಮಸೀದಿ ಕೆಡವಿದಾಗ ಮುಸ್ಲಿಂ ಭಾಂಧವರ ಭಾವನೆಗಳಿಗು ಘಾಸಿಯಾಗಿದೆ ಎಂಬ ಕಳಕಳಿ ಇರಲಿ…..
ವಿಶ್ವದ ಆಧ್ಯಾತ್ಮದ ತವರೂರು ಎಂಬ ಈ ನೆಲದ ಘನತೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ಪ್ರತಿ ರಾಮ ಭಕ್ತರ ಜವಾಬ್ದಾರಿ ಎಂಬುದನ್ನು ಮರೆಯದಿರಿ…
ನಮ್ಮ ಉನ್ಮಾದ ಈಗ ನಮ್ಮ ಜೊತೆಗಿರುವ ಮುಸ್ಲಿಂ ಸಮುದಾಯದ ತೀವ್ರ ಅಸಮಾಧಾನಕ್ಕೆ ಕಾರಣವಾಗದೆ ಅವರನ್ನು ಒಳಗೊಂಡ ಭಕ್ತಿಯ ಸಂಭ್ರಮವಾಗುವ ಹಬ್ಬವಾಗಲಿ….
ಕನಿಷ್ಠ ಈ ಮಣ್ಣಿನ ಮಾನವೀಯತೆ ಮರೆಯದೆ ಸಾಮಾನ್ಯ ಜನ ಸಂಯಮ ಕಾಪಾಡಿ….
ರಾಮ ಇಂದೇ ಕೊನೆಯಾಗುವುದಿಲ್ಲ. ಭಕ್ತಿ ಒಂದು ದಿನದ ಆಚರಣೆಯಲ್ಲ…..
ಮುಸ್ಲಿಂ ಗೆಳೆಯರೆ ನಮ್ಮ ಕೆಲವು ಜನರ ಈ ಕ್ಷಣದ ಅತಿರೇಕವನ್ನು ಕ್ಷಮಿಸುವ ಮತ್ತು ಅವರೊಂದಿಗೆ ಭಾಗಿಯಾಗುವ ಔದಾರ್ಯ ನಿಮಗಿರಲಿ….
ಮುಸ್ಲಿಮರೆ ನಿಮ್ಮ ಭಾವನೆಗೆ ನೋವಾಗಿದ್ದರೆ ಕ್ಷಮಿ ಇರಲಿ…..
ಈ ನಮ್ಮ ದೇಶ ಎಂದೆಂದಿಗೂ ಮಾನವೀಯತೆಯಲ್ಲಿ ವಿಶ್ವ ಗುರುವಾಗಿ ಮಾದರಿಯಾಗಲಿ…..
ಸರಿ ತಪ್ಪು ಸತ್ಯ ಸುಳ್ಳು ಏನೇ ಇರಲಿ ಮಾನವೀಯತೆ ಮುಂದಿರಲಿ. ಸಮನ್ವಯ ಸಹಬಾಳ್ವೆ ನಮ್ಮದಾಗಿರಲಿ…..
ಸರ್ವೇಜನೋ ಸುಖಿನೋ ಭವಂತು……
ಇದು ಈ ಕ್ಷಣದ ನಮ್ಮ ಸ್ಪಂದನೆ. ಭಾರತೀಯರ ಮತ್ತು ಭಾರತದ ಹಿತಾಸಕ್ತಿಯಿಂದ……
ವಿವೇಕಾನಂದ ಎಚ್. ಕೆ.
ಮನಸ್ಸುಗಳ ಅಂತರಂಗದ ಚಳವಳಿ.
9844013068……