Spread the love
  • ಉಡುಪಿ: ದಿನಾಂಕ: 19-01-2024(ಹಾಯ್ ಉಡುಪಿ ನ್ಯೂಸ್) ಪರ್ಯಾಯೋತ್ಸವದ ಜನಜಂಗುಳಿಯಲ್ಲಿ ಕೊರಂಗ್ರಪಾಡಿ ನಿವಾಸಿ ಶರೀನ ಬೇಗಂ(32) ಎಂಬವರ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಯಾರೋ ಕಳ್ಳರು ಎಳೆದು ಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  • ಕೊರಂಗ್ರಪಾಡಿ, ವಾಸುಕಿ ನಗರದ ನಿವಾಸಿ ಶರೀನ ಬೇಗಂ ಎಂಬವರು ದಿನಾಂಕ:18/01/2024 ರಂದು  ತನ್ನ ನಾದಿನಿ ಜುಮಿಲಾ, ಅತ್ತೆ ಫಾತಿಮಾ ಮತ್ತು  ಮಗಳಾದ  ಅನ್ಹ(4 ವರ್ಷ) ಜೊತೆಗೆ ಉಡುಪಿಯ ಪರ್ಯಾಯ ಇದ್ದುದ್ದರಿಂದ ಕೃಷ್ಣಮಠದ ರಥಬೀದಿಗೆ ಶಾಪಿಂಗ್ ಹೋಗಿದ್ದು, ರಥಬೀದಿಯ ಕನಕ ಗೋಪುರದ ಹತ್ತಿರವಿರುವ ಜುವೆಲ್ಲರಿ ಅಂಗಡಿ ಇರುವ ಜಂಕ್ಷನ್ ನಲ್ಲಿ ರಸ್ತೆಯ ಬದಿ ಇದ್ದ ಅಂಗಡಿಯಲ್ಲಿ ಸಾಮಾನುಗಳನ್ನು ನೋಡುತ್ತಿದ್ದಾಗ ಶರೀನ ಬೇಗಂ ಅವರ ಮಗಳಾದ ಅನ್ಹ ಬಳಿ ಬಂದು ಚೈನ್ ಹೋಯಿತು ಎಂದು ಹೇಳಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
  • ಆ ಸಮಯದಲ್ಲಿ ಶರೀನ ಬೇಗಂ ಅವರು ಚಿನ್ನದ ಚೈನನ್ನು ಹುಡುಕುತ್ತಿದ್ದಾಗ ಪಕ್ಕದಲ್ಲಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಅಂದಾಜು ಪ್ರಾಯ 30-35 ವರ್ಷದ ಯುವಕರು ಅಲ್ಲಿಂದ ಹೊರಟು ಹೋಗಿದ್ದು ಅವರ ಮೇಲೆ ಸಂಶಯವಿರುವುದಾಗಿಯೂ, ಅನ್ಹಳ 5 ಗ್ರಾಂ ತೂಕದ ಡೈಮಂಡ್ ಪೆಂಡೆಂಟ್ ಒಳಗೊಂಡ ಚಿನ್ನದ ಚೈನ್ ಆಗಿದ್ದು ,ಅಂದಾಜು ಮೌಲ್ಯ 50000/-ಆಗಿದೆ ಎಂದಿದ್ದಾರೆ.
  • ಯಾರೋ ಅಪರಿಚಿತರು ಅನ್ಹಳ ಕುತ್ತಿಗೆಯಲ್ಲಿದ್ದ ಚಿನ್ನದ ಚೈನನ್ನು ಎಳೆದುಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  • ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 392    ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
error: No Copying!