Spread the love

ಬ್ರಹ್ಮಾವರ: ದಿನಾಂಕ:19-01-2024(ಹಾಯ್ ಉಡುಪಿ ನ್ಯೂಸ್) ಬಸ್ಸಿನಲ್ಲಿ ಸಾಗಿಸುತ್ತಿದ್ದ ಅಂಚೆಕಛೇರಿಗೆ ಸಂಬಂಧಿಸಿದ ಬ್ಯಾಗನ್ನು ಯಾರೋ ಕಳ್ಳತನ ನಡೆಸಿದ್ದಾರೆ ಎಂದು ಅಂಚೆ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕೊಕ್ಕರ್ಣೆ ಅಂಚೆ ಕಛೇರಿಯ ಸಿಬ್ಬಂದಿಯವರಾದ ಶ್ರೀ ಹರಿಪ್ರಸಾದ್‌  ಎಂಬವರು ದಿನಾಂಕ 18/01/2023 ರಂದು ಬೆಳಿಗ್ಗೆ ಕೊಕ್ಕರ್ಣೆ ಬಸ್ಸ್‌ ನಿಲ್ದಾಣದಿಂದ KA-51-AA-9916 ನೇ ದುರ್ಗಾಪ್ರಸಾದ್‌ ಬಸ್ಸ್‌ ನಲ್ಲಿ ಕಳುಹಿಸಿದ್ದ  ನಾಲ್ಕೂರು ಮತ್ತು ನಂಚಾರು ಅಂಚೆ ಕಛೇರಿಗೆ ಸಂಬಂದಪಟ್ಟ ಅಂಚೆಯ ಬ್ಯಾಗನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಕೊಕ್ಕರ್ಣೆ ಅಂಚೆ ಕಚೇರಿಯ ಉಪ ಅಂಚೆ ಪಾಲಕರಾದ ಪ್ರಕಾಶ್ ಎನ್ ರವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಳವಾದ ಬ್ಯಾಗ್‌ ನಲ್ಲಿ ನಾಲ್ಕೂರು ಅಂಚೆ ಕಛೇರಿಗೆ ಸಂಬಂಧಿಸಿದ ರೂ 20,000/-ನಗದು ಮತ್ತು ಅಂಚೆ ಕಾಗದ ಪತ್ರಗಳು ಹಾಗೂ  ನಂಚಾರು ಅಂಚೆ ಕಛೇರಿಗೆ ಸಂಬಂಧಿಸಿದ ಅಂಚೆ ಕಾಗದ ಪತ್ರಗಳು ಇದ್ದಿರುತ್ತದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ : ಕಲಂ  379ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!