Spread the love

ಮಲ್ಪೆ: ದಿನಾಂಕ: 19-01-2024(ಹಾಯ್ ಉಡುಪಿ ನ್ಯೂಸ್) ಬೀಚ್ ಪರಿಸರದಲ್ಲಿ ಪೂರ್ವಾನುಮತಿ ಇಲ್ಲದೆ ತಡರಾತ್ರಿ ವರೆಗೆ ಡಿಜೆ ಸೌಂಡ್ ಹಾಕಿದ್ದವರ ಮೇಲೆ ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್ ರವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಿನಾಂಕ 15/01/2024 ರಂದು ರಾತ್ರಿ 11:00 ಗಂಟೆಗೆ  ಕೊಡವೂರು ಗ್ರಾಮದ   ವಢಬಾಂಡೇಶ್ವರ ವಾರ್ಡ್‌ ನ ಬೀಚ್‌ ಪರಿಸರದಲ್ಲಿನ ಮೆಹಂದಿ  ಕಾರ್ಯಕ್ರಮದಲ್ಲಿ ಡಿ ಜೆ ಸೌಂಡ್ ಹಾಕಿ ಸಾರ್ವಜನಿಕರಿಗೆ ಉಪದ್ರವಾಗುತ್ತಿರುವುದಾಗಿ ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್ ಅವರಿಗೆ ಸಾರ್ವಜನಿಕರಿಂದ ಮಾಹಿತಿ ಬಂದಿದೆ ಎನ್ನಲಾಗಿದೆ.

ಮಾಹಿತಿ ಬಂದ ಕೂಡಲೇ ಠಾಣೆಯ ಸಿಬ್ಬಂದಿಯವರೊಂದಿಗೆ ವಢಬಾಂಡೇಶ್ವರ ವಾರ್ಡ್‌ ನ ಬೀಚ್‌ ಪರಿಸರದಲ್ಲಿರುವ  ಕೇವಾತ್‌ ಗೆಸ್ಟ್‌ ಹೌಸ್‌  ಹತ್ತಿರ ಹೋದಾಗ ಅಲ್ಲಿ ಅತೀ ಕರ್ಕಶವಾದ ಡಿ ಜೆ ಸೌಂಡ್ ಹಾಕಿ ಕೊಂಡು 20-30 ಜನ ತಂಡ ಸೇರಿ  ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ ಎನ್ನಲಾಗಿದೆ.

ಈ ಬಗ್ಗೆ  ಕೇವಾತ್‌ ಗೆಸ್ಟ್‌ ಹೌಸ್‌ ನ ಮೆನೇಜರ್‌ ಬಸವರಾಜ್‌ ರವರಲ್ಲಿ ಕಾರ್ಯಕ್ರಮವನ್ನು ತಡ ರಾತ್ರಿವರೆಗೂ ನಡೆಸುತ್ತಿರುವ ಬಗ್ಗೆ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದುಕೊಂಡಿರುವ ಬಗ್ಗೆ ವಿಚಾರಿಸಿದಾಗ ಯಾವುದೇ ಪೂರ್ವಾನುಮತಿ ಅಥವಾ ಪರವಾನಿಗೆಯನ್ನು ಪಡೆದುಕೊಂಡಿರುವುದಿಲ್ಲವೆಂದು ಪೊಲೀಸರಿಗೆ ತಿಳಿಸಿರುತ್ತಾರೆ ಎನ್ನಲಾಗಿದೆ.

ಹಾಗೂ ಕಾರ್ಯ ಕ್ರಮದಲ್ಲಿಯ ಡಿಜೆಯ ಬಗ್ಗೆ ವಿಚಾರಿಸಿದಾಗ ವಿಜಯೇಂದ್ರ ಕೋಟೇಶ್ವರ ಕುಂದಾಪುರ ಎಂಬವರ  ಡಿಜೆ ಆಗಿರುವುದಾಗಿ  ತಿಳಿಸಿರುತ್ತಾರೆ ಎನ್ನಲಾಗಿದೆ .ಸ್ಥಳದಲ್ಲಿದ್ದ 1 SOUND MIXER,   2 DJ SOUND  BOX ಅನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ: 109 ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು  290 ಐಪಿಸಿಯಂತೆ ಪ್ರಕರಣ ದಾಖಲಾಗಿದೆ .

error: No Copying!