ಉಡುಪಿ: ದಿನಾಂಕ:16-01-2024( ಹಾಯ್ ಉಡುಪಿ ನ್ಯೂಸ್) ವಿದೇಶದಲ್ಲಿ ಯುವತಿಯೋರ್ವಳೊಂದಿಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡು ಊರಿನಲ್ಲಿ ಇನ್ನೊಂದು ವಿವಾಹವಾಗಿ ಹೆಂಡತಿಗೆ ಎರಡು ಮಕ್ಕಳನ್ನು ಕರುಣಿಸಿ ,ಗಂಡನು ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಿರುತ್ತಾರೆ ಎಂದೂ ಗಂಡನ ಮನೆಯವರೂ ಅವನೊಂದಿಗೆ ಸೇರಿ ಮಾನಸಿಕ ದೈಹಿಕ ಹಿಂಸೆ ನೀಡಿದ್ದಾರೆ ಎಂದು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಬ್ರಹ್ಮಾವರ ವಾರಂಬಳ್ಳಿ ಗ್ರಾಮದ ನಿವಾಸಿ ನೇತ್ರಾವತಿ (30) ಎಂಬವರ ಮತ್ತು ಪ್ರಸಾದ್ ಕರ್ಕೇರಾ ಎಂಬವರ ಮದುವೆ ದಿನಾಂಕ 12/09/2018 ರಂದು ಗುರು ಹಿರಿಯರ ಸಮಕ್ಷಮ ಆಗಿದ್ದು, ,ಅವರ ದಾಂಪತ್ಯದಲ್ಲಿ ಸಾಚಿ ಮತ್ತು ಅವ್ಯಾನ್ ಎಂಬ ಎರಡು ಮಕ್ಕಳಿರುತ್ತಾರೆ ಎಂದು ನೇತ್ರಾವತಿ ಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇವರ ಮದುವೆಯ ಸಂಪೂರ್ಣ ಖರ್ಚನ್ನು ನೇತ್ರಾವತಿ ಯವರ ತಂದೆ ಮಾಡಿರುತ್ತಾರೆ ಎಂದಿದ್ದಾರೆ. ಮದುವೆಯ ನಂತರ ನೇತ್ರಾವತಿ ಯವರು ತನ್ನ ಗಂಡನೊಂದಿಗೆ ಸಂಸಾರಿಕ ಜೀವನವನ್ನು ನಡೆಸಲು ತನ್ನ ಗಂಡನ ಮನೆಯಾದ ಪರ್ಕಳದ ಶೆಟ್ಟಿಬೆಟ್ಟುವಿಗೆ ಹೋಗಿರುತ್ತಾರೆ.ಎಂದಿದ್ದಾರೆ. ನಂತರ ಗಂಡ ನೇತ್ರಾವತಿಯವರನ್ನು ಖತಾರ್ ಗೆ ಕರೆದುಕೊಂಡು ಹೋಗಿದ್ದು, ಆ ಸಂದರ್ಭದಲ್ಲಿ ಗಂಡ ಪ್ರಸಾದ್ ನಿಗೆ ಒಬ್ಬಾಕೆ ಹುಡುಗಿಯೊಂದಿಗೆ ಸಂಬಂಧ ಇರುವ ಬಗ್ಗೆ ತಿಳಿದು ಈ ವಿಚಾರದ ಬಗ್ಗೆ ನೇತ್ರಾವತಿಯವರು ಗಂಡನಲ್ಲಿ ವಿಚಾರಿಸಿದಾಗ ನೇತ್ರಾವತಿ ಯವರಿಗೆ ಅವಾಚ್ಯವಾಗಿ ಬೈದಿರುತ್ತಾನೆ ಎಂದಿದ್ದಾರೆ .
ದಿನಾಂಕ 25/04/2019 ರಂದು ನೇತ್ರಾವತಿ ಯವರು ವಾಪಾಸು ಊರಿಗೆ ಬಂದು ಮೊದಲನೇ ಮಗುವಿಗೆ ಜನ್ಮ ನೀಡಿರುತ್ತಾರೆ. ನಂತರ ಗಂಡನ ಮನೆಯಲ್ಲಿದ್ದ ಸಮಯದಲ್ಲಿ ಗಂಡನ ಮನೆಯಲ್ಲಿದ್ದ ಅಪ್ಪು , ಜಯಶ್ರೀ, ಶ್ರೀಶಾಂತ್, ಸಾಧನಾ ರೇಖಾ , ಶಂಕರ ಇವರೆಲ್ಲರೂ ನೇತ್ರಾವತಿ ಯವರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡುತ್ತಿದ್ದರು ಎಂದು ದೂರಿದ್ದಾರೆ.
ಗಂಡ ಪ್ರಸಾದನು 2022 ರ ಜನವರಿಯಲ್ಲಿ ನೇತ್ರಾವತಿ ಯವರನ್ನು ಇನ್ನೊಮ್ಮೆ ಖತಾರ್ ಗೆ ಕರೆದುಕೊಂಡು ಹೋಗಿದ್ದು, ನೇತ್ರಾವತಿ ಯವರು ಅಲ್ಲಿ 2 ನೇ ಮಗುವಿಗೆ ಜನ್ಮ ನೀಡಿರುತ್ತಾರೆ ಎಂದಿದ್ದಾರೆ. ಗರ್ಭಿಣಿ ಇರುವ ಸಮಯದಲ್ಲಿ ಗಂಡ ಪ್ರಸಾದನು ಮಗುವನ್ನು ತೆಗೆಸು ಎಂದು ನೇತ್ರಾವತಿ ಯವರ ಜುಟ್ಟು ಹಿಡಿದು ಎಳೆದು ಬಾಯಿಗೆ ಕೈ ಹಾಕಿ ಎಳೆದು ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಿರುತ್ತಾನೆ ಎಂದು ದೂರಿದ್ದಾರೆ.
ಆ ನಂತರ ಊರಿಗೆ ಬಲವಂತವಾಗಿ ಕರೆದುಕೊಂಡು ಬಂದಿರುತ್ತಾನೆ ಎಂದಿದ್ದಾರೆ. ಊರಿಗೆ ಬಂದ ನಂತರ ಗಂಡನ ಮನೆಯವರೆಲ್ಲರೂ ನೇತ್ರಾವತಿ ಯವರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ನೇತ್ರಾವತಿ ಯವರು ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ: 498(A), 323, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.