ಹಾವೇರಿ: ದಿನಾಂಕ :16-01-2024(ಹಾಯ್ ಉಡುಪಿ ನ್ಯೂಸ್) ಹಾನಗಲ್ ತಾಲೂಕಿನ ನಾಲ್ಕರ ಕ್ರಾಸ್ ಸಮೀಪದ ಈಡಿಗಾಸ್ ಲಾಡ್ಜಿನಲ್ಲಿ ಜನವರಿ 8 ರಂದು ಕೊಠಡಿಯಲ್ಲಿದ್ದ ಶಿರಸಿ ಮೂಲದ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಯ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿ ಥಳಿಸಿ ಯುವತಿಯನ್ನು ಹೊರಗೊಯ್ದು 7 ಜನರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎಂದು ಸಂತ್ರಸ್ತೆ ಜನವರಿ 11ರಂದು ನ್ಯಾಯಾಧೀಶರ ಮುಂದೆ ಹೇಳಿಕೆಯನ್ನು ನೀಡಿದ್ದರು.
ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸುವಲ್ಲಿ ನಿರ್ಲಕ್ಷ್ಯ, ಆರೋಪಿಗಳನ್ನು ಶೀಘ್ರ ಬಂಧಿಸುವಲ್ಲಿ ವಿಳಂಬ ತೋರಿ ಕರ್ತವ್ಯ ಲೋಪ ಆರೋಪದ ಮೇರೆಗೆ ಹಾನಗಲ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶ್ರೀಧರ್ ಎಸ್.ಆರ್ ಮತ್ತು ಕಾನ್ಸ್ಟೇಬಲ್ ಇಲಿಯಾಜ್ ಶೇತಸನದಿ ಅವರನ್ನು ಎಸ್ಪಿ ಅಂಶುಕುಮಾರ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.