Spread the love

ಕಾಪು: ದಿನಾಂಕ : 07-01-2024(ಹಾಯ್ ಉಡುಪಿ ನ್ಯೂಸ್) ಇಬ್ಬರು ಮಕ್ಕಳ ತಾಯಿಯೋರ್ವರು ಗಂಡ ಬೇರೊಬ್ಬ ಹೆಂಗಸಿನೊಂದಿಗೆ ಸಂಬಂಧ ಇಟ್ಟುಕೊಂಡಿದ್ದು ತನಗೆ ಮತ್ತು ಮಕ್ಕಳಿಗೆ ಖರ್ಚಿ ಗೆ ಹಣವನ್ನೂ ನೀಡದೆ ಸಂಕಷ್ಟದಲ್ಲಿ ಹಾಕಿದ್ದಾನೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಳಪು ಗ್ರಾಮದ ನಿವಾಸಿ ಶ್ರೀಮತಿ ಉಮೀನಾ ಎಂಬವರು 15 ವರ್ಷಗಳ ಹಿಂದೆ ಮಲ್ಲಾರು ಗ್ರಾಮದ ಪಕೀರಣಕಟ್ಟೆಯ ಅಬ್ದುಲ್ ರೌಫ್ ಎಂಬವರೊಂದಿಗೆ  ವಿವಾಹವಾಗಿದ್ದು, ಅವರಿಗೆ  ಇಬ್ಬರು  ಮಕ್ಕಳು ಇದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

  4 ವರ್ಷದಿಂದ ಉಮೀನಾರವರ ಗಂಡ ಉಮೀನಾರವರನ್ನು ಮತ್ತು ಅವರ  ಮಕ್ಕಳನ್ನು  ನಿರ್ಲಕ್ಷಿಸಿದ್ದು, ದುಬೈಯಲ್ಲಿ ಸಬೀನಾ ಎಂಬುವವರ ಜೊತೆ  ವಾಸವಾಗಿರುತ್ತಾನೆ ಎಂದಿದ್ದಾರೆ . ಸಬೀನಾಳಿಂದ ತನ್ನ ಗಂಡನನ್ನು ದೂರ ಇಡುವ ಉದ್ದೇಶದಿಂದ ಉಮೀನಾರವರು ಹಣ ಖರ್ಚು ಮಾಡಿ  ಅವರ ಗಂಡನನ್ನು ದುಬೈಯಿಂದ  ಬೆಹರಿನ್ ದೇಶಕ್ಕೆ  ಕಳುಹಿಸಿದರೂ  ಸಬೀನಾಳು ಮತ್ತೆ ಉಮೀನಾರವರ ಗಂಡನನ್ನು ದುಬೈಗೆ ಕರೆಸಿಕೊಂಡು ಅವರಿಬ್ಬರೂ ಒಟ್ಟಿಗೇ ಸಂಸಾರ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಉಮೀನಾರವರು ಅವರ ಗಂಡನ ಮನೆಯಲ್ಲಿ ವಾಸ್ತವ್ಯ ಇರುವ ಸಮಯದಲ್ಲಿ ಅವರ ಅತ್ತೆ, ಮಾವ ಉಮೀನಾರವರಿಗೆ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡಿರುತ್ತಾರೆ ಎಂದು ದೂರಿದ್ದಾರೆ. ಉಮೀನಾರವರ ಗಂಡನ ಮೊಬೈಲನ್ನು ಸಬೀನಾಳು ಉಪಯೋಗಿಸುತ್ತಿದ್ದು,  ಉಮೀನಾರವರ ಗಂಡ  ಎಲ್ಲಿದ್ದಾನೆಂದು ಕೇಳಿದಾಗ  ಸಬೀನಾಳು ಬೈದು ಉಮೀನಾರವ

ರಿಗೆ ಮೆಸೇಜ್ ಮಾಡಿರುತ್ತಾಳೆ ಎಂದು ದೂರಿದ್ದಾರೆ.  

ಅಬ್ದುಲ್ ರೌಫ್ ನು ಉಮೀನಾರವರನ್ನು  ಮತ್ತು  ಅವರ ಮಕ್ಕಳನ್ನು ನೋಡಿಕೊಳ್ಳದೆ, ಖರ್ಚಿಗೆ ಹಣ ಕೊಡದೇ  ಇರುವುದರಿಂದ ಉಮೀನಾರವರಿಗೆ  ತೊಂದರೆಯಾಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ

ಉಮೀನಾರವರು ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆಯಲ್ಲಿ ಕಲಂ: 498(ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!