Spread the love

ಪಡುಬಿದ್ರಿ: ದಿನಾಂಕ:06-01-2024(ಹಾಯ್ ಉಡುಪಿ ನ್ಯೂಸ್) ಪಡುಬಿದ್ರಿ ಜಂಕ್ಷನ್ ನಲ್ಲಿ ವಾಹನ ತಪಾಸಣೆ ವೇಳೆ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ ಈಚರ್ ಟಿಪ್ಪರ್ ಚಾಲಕನನ್ನು ಪಡುಬಿದ್ರಿ ಪೊಲೀಸ್ ಠಾಣೆಯ ಎಎಸ್ಐ ಸುರೇಶ್ ಎಂ ರವರು ಬಂಧಿಸಿದ್ದಾರೆ.

ಪಡುಬಿದ್ರಿ ಠಾಣಾ ಎಎಸ್‌‌ಐ ಸುರೇಶ್ ಎಂ ರವರು ದಿನಾಂಕ: 06.01.2024 ರಂದು ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿಯ ಕಾರ್ಕಳ ಜಂಕ್ಷನ್‌‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಮಯ KA-20-AB-3474 ನೇ ನಂಬ್ರದ ಈಚರ್ ಟಿಪ್ಪರ್ ಲಾರಿಯ ಚಾಲಕ ಪ್ರಮೋದ್ ಎಂಬಾತನು ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಸುಮಾರು 15,000/- ರೂಪಾಯಿ ಬೆಲೆಬಾಳುವ ಸುಮಾರು 3 ಯೂನಿಟ್‌ನಷ್ಟು ಮರಳು ತುಂಬಿಸಿರುವುದು ಕಂಡು ಬಂದಿದೆ ಎನ್ನಲಾಗಿದೆ.

, ಚಾಲಕನ ಬಳಿ ಮರಳುಗಾರಿಕೆ ಬಗ್ಗೆ ಪರ್ಮಿಟ್‌ ಆಗಲಿ, ಪರವಾನಿಗೆ ಆಗಲಿ ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳು ಇರಲಿಲ್ಲ ಎನ್ನಲಾಗಿದೆ . ಆದ್ದರಿಂದ KA-20-AB-3474 ನೇ ನಂಬ್ರದ ಈಚರ್ ಟಿಪ್ಪರ್ ಲಾರಿಯ ಚಾಲಕ ಪ್ರಮೋದ್ ಎಂಬವನು ಮೂಡಬಿದ್ರೆಯ ಪುತ್ತಿಗೆ ಗ್ರಾಮದ ಪಾಲ್ಕಡದ ಕೊಡ್ಯಡ್ಕ ದೇವಸ್ಥಾನದ ಹತ್ತಿರ ಮರಳನ್ನು ಕಳವು ಮಾಡಿ ಯಾವುದೇ ಪರವಾನಗಿ ಇಲ್ಲದೇ ಸಾಗಿಸುತ್ತಿದ್ದ ಎಂದು ದೂರಲಾಗಿದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 379 ಐಪಿಸಿ ಮತ್ತು ಕಲಂ: 66 ಜೊತೆಗೆ 192 (ಎ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

error: No Copying!