ಕಾರ್ಕಳ: ದಿನಾಂಕ: 06/01/2024 (ಹಾಯ್ ಉಡುಪಿ ನ್ಯೂಸ್) ಕಿನ್ನಿಗೋಳಿ ಕಡೆಯಿಂದ ಅಕ್ರಮ ಮರಳು ಕಳ್ಳ ಸಾಗಾಣಿಕೆ ನಡೆಸುತ್ತಿದ್ದ ಐದು ಟಿಪ್ಪರ್ ಮತ್ತು ಅವುಗಳ ಚಾಲಕರನ್ನು ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಸಿ ಶಿವಕುಮಾರ್ ಕುರಿ ಅವರು ಸಿಪಿಸಿ ಯೋಗೀಶ್ ಅವರೊಂದಿಗೆ ದಿನಾಂಕ :05-01-2024ರಂದು ರಾತ್ರಿ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿರುವಾಗ ದಿನಾಂಕ: 06/01/2024 ರಂದು ಮುಂಜಾನೆ ಆರೋಪಿ 1. ಗದಿಗೆಪ್ಪ (40) ಸವದತ್ತಿ ತಾಲೂಕು, ಬೆಳಗಾಂ ಜಿಲ್ಲೆ 2. ಹಾಲಪ್ಪ (42) ಉಗ್ಗಿನಕೇರಿ, ಗುಂಜಾವತಿ ಗ್ರಾಮ 3. ಜಗದೀಶ ಶಣ್ಮುಕಪ್ಪ (32) ಉಗ್ಗಿನಕೇರಿ, ಗುಂಜಾವತಿ ಅಂಚೆ 4. ಕುಮಾರ್ (35) ಹಾನಾಪುರ ಅಂಚೆ ಗುಳೇದಗುಡ್ಡ ತಾಲೂಕು, ಬಾಗಲಕೋಟೆ ಜಿಲ್ಲೆ 5. ಕೃಷ್ಣ (25) ಕೊಳಲಗಿರಿ ಅಂಚೆ ಮತ್ತು ಗ್ರಾಮ ಉಡುಪಿ 6. ನೀಲ್ ರೋಶನ್ ಮಾಬೆನ್ ಇವರುಗಳು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಕಿನ್ನಿಗೊಳಿ ಕಡೆಯಿಂದ ಮುಂಡ್ಕೂರು ಕಡೆಗೆ KA13A6592. KA20AB0754 , KA70-3266, KL27A4763, ಹಾಗೂ KA19AB2259 ನೇ ನಂಬ್ರದ ಐದು ಟಿಪ್ಪರ್ ವಾಹನಗಳಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದವರನ್ನು ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ .
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 379 ಜೊತೆಗೆ 34 ಐಪಿಸಿ ಕಲಂ: 66 ಜೊತೆಗೆ 192(A) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.