ಕೋಟ: ದಿನಾಂಕ: 04-01-2024(ಹಾಯ್ ಉಡುಪಿ ನ್ಯೂಸ್) ಗಿಳಿಯಾರು ನಿವಾಸಿ ಅಶೋಕ ಎಂಬವರಿಂದ ಸಾಲ ಪಡೆದ ವ್ಯಕ್ತಿ ಹಣ ವಾಪಾಸ್ ನೀಡದೆ ಇದೀಗ ಜೀವ ಬೆದರಿಕೆ ಹಾಕಿರುವುದಲ್ಲದೆ ಪತ್ರಿಕೆ ಯಲ್ಲಿ ಮಾನ ಹಾನಿ ಮಾಡಿದ್ದಾನೆ ಎಂದು ಆರೋಪಿಸಿ ಅಶೋಕ ರವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬ್ರಹ್ಮಾವರ ,ಗಿಳಿಯಾರು ಗ್ರಾಮದ ನಿವಾಸಿ ಅಶೋಕ (63) ಎಂಬವರು ದಿನಾಂಕ 13/11/2020 ರಂದು ಆರೋಪಿ ಸತೀಶ ಎಂಬುವವರಿಗೆ ಸಾಲವಾಗಿ 3,00,000/- ರೂಪಾಯಿಗಳ ಚೆಕ್ ನೀಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಬಳಿಕ ಆರೋಪಿ ಸತೀಶ ಹಣವನ್ನು ಮರಳಿ ನೀಡದೇ ಇದ್ದು , ಈ ಹಣದ ಬಗ್ಗೆ ಅಶೋಕ ರವರು ವಿಚಾರಿಸಿದಾಗ ಆರೋಪಿ ಸತೀಶನು ಅಶೋಕ ರವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಪೊಲೀಸರಿಗೆ ದೂರಿದ್ದಾರೆ.
ಅಲ್ಲದೇ ಇನ್ನೋರ್ವ ಆರೋಪಿ ಗೋಪಾಲ ಎಂಬವ ಪತ್ರಿಕೆಯಲ್ಲಿ ಅಶೋಕ ರವರ ಬಗ್ಗೆ ಅಪಪ್ರಚಾರ ಮಾಡಿ ಆರೋಪಿ ಸತೀಶ ನಿಗೆ ಪ್ರಚೋದನೆ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 420, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.