Spread the love

ಕೋಟ: ದಿನಾಂಕ: 05-01-2024(ಹಾಯ್ ಉಡುಪಿ ನ್ಯೂಸ್) ಪಾಂಡೇಶ್ವರ ಗ್ರಾಮದ ನಿವಾಸಿ ವಯೋವೃದ್ಧೆ ಕಮಲ ಎಂಬವರಿಗೆ ಜಾಗದ ವಿಚಾರದಲ್ಲಿ ಮಕ್ಕಳು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಬ್ರಹ್ಮಾವರ, ಪಾಂಡೇಶ್ವರ ಗ್ರಾಮದ ನಿವಾಸಿ ಕಮಲ (63) ಎಂಬವರ ಜಾಗಕ್ಕೆ ದಿನಾಂಕ:04-01-2024ರಂದು ಸಂಜೆ ಅವರು ಮಕ್ಕಳಾದ ಕೃಷ್ಣ , ಉದಯ  ಮತ್ತು ಉದಯ ರವರ ಹೆಂಡತಿ ಹರ್ಷಿತಾ ಎಂಬುವವರು ಅಕ್ರಮ ಪ್ರವೇಶ ಮಾಡಿ ಕಮಲರವರನ್ನು ಅಡ್ಡಗಟ್ಟಿ ಜಾಗದ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ದೂರಿದ್ದಾರೆ.

  ಮೂರು ಜನರೂ ಸೇರಿ ಬೈದು ,ಎಳೆದಾಡಿ, ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಕಮಲ ಅವರು ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆಯಲ್ಲಿ ಕಲಂ: 341, 504, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!