ಕೋಟ: ದಿನಾಂಕ: 04-01-2024(ಹಾಯ್ ಉಡುಪಿ ನ್ಯೂಸ್) ಪಡುಕೆರೆ ನಿವಾಸಿಯೊಬ್ಬರಿಗೆ ವ್ಯಕ್ತಿ ಯೋರ್ವ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ ,ಮಣೂರು-ಪಡುಕೆರೆ ಗ್ರಾಮ, ನಿವಾಸಿ ಪ್ರದೀಪ್ (32) ಎಂಬವರು ದಿನಾಂಕ 03/01/2024 ರಂದು ಸಂಜೆ ಪಡುಕೆರೆ ಸರ್ಕಲ್ ನಲ್ಲಿ ತಮ್ಮ ಪರಿಚಯದವರೊಂದಿಗೆ ಮಾತನಾಡುತ್ತಿರುವಾಗ, ಯೋಗೀಂದ್ರ ಎಂಬಾತನು ಅಲ್ಲಿಗೆ ಬಂದು ಪ್ರದೀಪ್ ರನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರದೀಪ್ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 341, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.