ಉಡುಪಿ: ದಿನಾಂಕ: 04-01-2024(ಹಾಯ್ ಉಡುಪಿ ನ್ಯೂಸ್) ನಗರದ ಜಟ್ಕಾ ರಿಕ್ಷಾ ನಿಲ್ದಾಣದ ಚಾಲಕ ಕಾಡುಬೆಟ್ಟು ನಿವಾಸಿ ಸುರೇಶ್ ಎಂಬವರು ತಮ್ಮ ರಿಕ್ಷಾದಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರನ್ನು ಅಜ್ಜರಕಾಡುವಿನಿಂದ ಬಸ್ ನಿಲ್ದಾಣದ ಕಡೆಗೆ ಬಾಡಿಗೆಗೆ ಕರೆದುಕೊಂಡು ಹೋಗುತ್ತಿದ್ದಾಗ ಅಜ್ಜರಕಾಡು ಸುದರ್ಶನ್ ಫ್ಲ್ಯಾಟ್ ಮುಂಭಾಗದಲ್ಲಿ ಚಾಲಕ ಸುರೇಶ್ ರವರು
ರಿಕ್ಷಾ ಚಲಾಯಿಸುತ್ತಿದ್ದಂತೆ ಹಠಾತ್ತನೆ ಕುಸಿದಿದ್ದು ರಿಕ್ಷಾ ವಿರುದ್ಧ ದಿಕ್ಕಿನಲ್ಲಿ ಚಲಿಸಿ ವಿದ್ಯುತ್ ಕಂಬಕ್ಕೆ ಗುದ್ದಿ ನಿಂತಿದೆ.
ಚಾಲಕ ಸೀಟಿನಲ್ಲಿ ಕುಸಿದು ಬಿದ್ದಿದ್ದ ಸುರೇಶ್ ರವರನ್ನು ಅದೇ ರಸ್ತೆಯಲ್ಲಿ ಬಂದ ರಿಕ್ಷಾ ಚಾಲಕ ಮತ್ತು ಪ್ರಯಾಣಿಕರು ತಮ್ಮ ರಿಕ್ಷಾದಲ್ಲಿ ಅಜ್ಜರಕಾಡು ಆಸ್ಪತ್ರೆ ಗೆ ಕೊಂಡು ಹೋಗಿದ್ದು ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎನ್ನಲಾಗಿದೆ. ಚಾಲಕನ ಸ್ಥಿತಿ ಗಂಭೀರ ವಾಗಿದ್ದು ಇಬ್ಬರು ಮಹಿಳಾ ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ.