Spread the love

ಉಡುಪಿ: ದಿನಾಂಕ:29-12-2023 (ಹಾಯ್ ಉಡುಪಿ ನ್ಯೂಸ್) ಕರವೇ ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ ನಾರಾಯಣಗೌಡರನ್ನು ಹಾಗೂ ಕಾರ್ಯಕರ್ತರನ್ನು ಕಾನೂನು ಬಾಹಿರವಾಗಿ ಬಂದಿಸಿರುವುದನ್ನು ಖಂಡಿಸಿ ಕರವೇ ಉಡುಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಲಾಯಿತು.

ಕಡ್ಡಾಯ ಕನ್ನಡ ನಾಮಫಲಕ ಅಭಿಯಾನದ ನೇತೃತ್ವವಹಿಸಿ ಬೃಹತ್ ಪ್ರತಿಭಟನಾ ಜಾಗೃತಿ ಹೋರಾಟ ಹಮ್ಮಿಕೊಂಡಿರುವ ಕರವೇ ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ ನಾರಾಯಣಗೌಡರು ಮತ್ತು ಕಾರ್ಯಕರ್ತರನ್ನು ಅಕ್ರಮವಾಗಿ ಬಂಧಿಸಿ ಅಗೌರವದಿಂದ ನಡೆಸಿಕೊಂಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ಬೇಷರತ್ತು ಜಾಮೀನಿನ ಮೇಲೆ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಕರವೇ ಉಡುಪಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಪ್ರತಿಭಟನೆ ನಡೆಸಿದ ನಂತರ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು .

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ. ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಗೀತಾ ಪಾಂಗಾಳ . ಜಿಲ್ಲಾ ಉಪಾಧ್ಯಕ್ಷರಾದ .ಸಂತೋಷ್ ಕುಲಾಲ್ ,ಜಿಲ್ಲಾ ಕಾರ್ಯದರ್ಶಿ ಸಿದ್ದಣ್ಣ ಎಸ್ ಪೂಜಾರಿ. ಸಾಂಸ್ಕೃತಿಕ ಕಾರ್ಯದರ್ಶಿ ಎಸ್ ಕೃಷ್ಣಕುಮಾರ್. ಜಿಲ್ಲಾ ಸದಸ್ಯರು ಗೋಪಾಲ. ಜಿಲ್ಲಾ ಮಹಿಳಾ ಉಪಾಧ್ಯಕ್ಷರಾದ ದೇವಕಿ ಬಾರ್ಕೂರು. ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಜ್ಯೋತಿ, ಜಿಲ್ಲಾ ಮಹಿಳಾ ಕಾರ್ಯದರ್ಶಿ ಚಂದ್ರಕಲಾ. ಜಿಲ್ಲಾ ಮಹಿಳಾ ಸಾಂಸ್ಕೃತಿಕ ಸಹ ಕಾರ್ಯದರ್ಶಿ ಜ್ಯೋತಿಆರ್. ಉಡುಪಿ ತಾಲೂಕು ಅಧ್ಯಕ್ಷರು ಹೆಲನ್ ಸೋನ್ಸ್. ಉಡುಪಿ ಮಹಿಳಾ ಘಟಕದ ತಾಲೂಕು ಉಪಾಧ್ಯಕ್ಷರಾದ ಪವಿತ್ರ ಶೆಟ್ಟಿ. ಕಾಪು ತಾಲೂಕು ಸದಸ್ಯರು ಶಶಿಕಲಾ ನವೀನ್. ಉಡುಪಿ ತಾಲೂಕು ಸದಸ್ಯರಾದ ಆಶಾ ಇನ್ನಿತರರು ಉಪಸ್ಥಿತರಿದ್ದರು.

error: No Copying!