- ಬ್ರಹ್ಮಾವರ: ದಿನಾಂಕ :29-12-2023(ಹಾಯ್ ಉಡುಪಿ ನ್ಯೂಸ್) ವಾರಂಬಳ್ಳಿ ಗ್ರಾಮದ ನಿವಾಸಿ ಯೋರ್ವರ ಅಂಗಡಿಗೆ ನುಗ್ಗಿದ ಮಹಿಳೆ ಹಾಗೂ ಆಕೆಯ ಮಗ ಅಂಗಡಿ ಪುಡಿಗಟ್ಟಿ ಬೆದರಿಕೆ ಹಾಕಿದ್ದಾರೆ ಎಂದು ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದಾರೆ.
- ಬ್ರಹ್ಮಾವರ, ವಾರಂಬಳ್ಳಿ ಗ್ರಾಮದ ನಿವಾಸಿ ಸಂದೇಶ್ (31) ಎಂಬವರು ಬ್ರಹ್ಮಾವರದ ಸಾಗರ್ ಸೆಂಟರ್ ಕಾಂಪ್ಲೆಕ್ಸ್ ನಲ್ಲಿ ಜೆರಾಕ್ಸ್ ಮತ್ತು ಸ್ಟಿಕ್ಕರ್ ಕಟ್ಟಿಂಗ್ ಅಂಗಡಿ ನಡೆಸಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ಸಂದೇಶ್ ಅವರು ದಿನಾಂಕ 28/12/2023 ರಂದು ಅಂಗಡಿಯಲ್ಲಿರುವಾಗ ಮಧ್ಯಾಹ್ನ ಹೊತ್ತು ಕುಂದಾಪುರ ಕೋರ್ಟ್ ನಲ್ಲಿ ಕೋರ್ಟ್ ಅಮೀನ್ ಕೆಲಸ ಮಾಡಿಕೊಂಡಿರುವ ಆರೋಪಿತೆ ಸವಿತಾ ಎಂಬವರು ಸಂದೇಶ್ ರವರ ಅಂಗಡಿಗೆ ಅಕ್ರಮವಾಗಿ ಪ್ರವೇಶ ಮಾಡಿ, ಕೈಯಿಂದ ಸಂದೇಶ್ ರವರಿಗೆ ಹೊಡೆದು, ಅಂಗಡಿಯಲ್ಲಿರುವ ಸಾಮಾಗ್ರಿಗಳನ್ನು ಪುಡಿ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುತ್ತಾರೆ ಎಂದೂ ನಂತರ ಆರೋಪಿತೆ ಸವಿತಾರವರ ಮಗ ಆರೋಪಿ ಗೌತಮ್‌ನು ಸಂದೇಶ್ ರವರು ಮನೆಗೆ ಹೋಗುವ ದಾರಿಯಲ್ಲಿ ಅವರನ್ನು ಅಡ್ಡಗಟ್ಟಿ ಬೆದರಿಕೆ ಹಾಕಿರುತ್ತಾನೆ ಎಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
- ಸಂದೇಶ್ ರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ: 448, 323, 427, 504, 506, 341 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.