Spread the love

ಬ್ರಹ್ಮಾವರ: ದಿನಾಂಕ: 28-12-2023(ಹಾಯ್ ಉಡುಪಿ ನ್ಯೂಸ್) ಪತ್ರಿಕೆಯೊಂದರ ಮಾಲೀಕತ್ವದ ವಿಚಾರದಲ್ಲಿ ಕೆಲವರು ಸುಳ್ಳು ಸುದ್ದಿ ಗಳನ್ನು ಹಬ್ಬಿಸಿ ಮಾನ ಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪತ್ರಿಕೆಯ ಅಧಿಕ್ರತ ಮಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಬ್ರಹ್ಮಾವರ,ಕರ್ಜೆ ನಿವಾಸಿ ಆಶಾ(35) ಎಂಬವರು ಹಾಯ್‌ ಕರಾವಳಿ ಎನ್ನುವ ಕನ್ನಡ ಪತ್ರಿಕೆಯ ಅದೀಕೃತ ಮಾಲಿಕರು ಹಾಗೂ ಶ್ರೀ ಅಮ್ಮ ರವಿ ಎಂಬವರು ಅಧಿಕೃತವಾಗಿ ಪ್ರಕಾಶಕ/ಮುದ್ರಕ/ಸಂಪಾದಕರಾಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಹಾಯ್ ಕರಾವಳಿ ಪತ್ರಿಕೆಯನ್ನು ಆಶಾರವರು ಅರೋಪಿ ವಿ. ಗೋಪಾಲ ಎಂಬವರಿಂದ ಅಧೀಕೃತವಾಗಿ 2020-21 ರಲ್ಲಿ ಖರೀದಿಮಾಡಿರುತ್ತಾರೆ ಎಂದಿದ್ದಾರೆ. ಆ ನಂತರ ಪತ್ರಿಕೆಯ ಅಬಿವೃದ್ಧಿ ನೋಡಿ ಅರೋಪಿ ವಿ.ಗೋಪಾಲ ಆಶಾರವರ  ಮನೆಗೆ ಬಂದು ಪತ್ರಿಕೆಯನ್ನು ವಾಪಾಸ್ಸು ನೀಡಿ, ನಾನೇ ನಡೆಸುತ್ತೇನೆ ಇಲ್ಲವಾದಲ್ಲಿ 15 ಲಕ್ಷ ರೂಪಾಯಿ ನೀಡಬೇಕು ಎಂದು ಕೇಳಿದ್ದು, ಅದನ್ನು ಆಶಾರವರು ನಿರಾಕರಿಸಿದ್ದಾರೆ ಎಂದಿದ್ದಾರೆ .

ಇದರಿಂದ ಸಿಟ್ಟಾದ ಅರೋಪಿ ವಿ.ಗೋಪಾಲನು ನೀನು ಪತ್ರಿಕೆ ಹೇಗೆ ನಡೆಸುತ್ತೀ ನೋಡುತ್ತೇನೆ, ನಿನ್ನ ಮತ್ತು ನಿನ್ನ ಗಂಡನ ಮಾನ, ಮರ್ಯಾದೆ ಹರಾಜು ಹಾಕಿ ನಿಮ್ಮನ್ನು ಬೀದಿಗೆ ತರುತ್ತೇನೆ ಎಂದು ಅವಾಚ್ಯವಾಗಿ ನಿಂದನೆ ಮಾಡಿ, ಗಂಡ, ಹೆಂಡತಿ ನಿನ್ನ ಪರಿವಾರವನ್ನು ಮುಗಿಸುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆ ನಂತರ ಆರೋಪಿ ವಿ.ಗೋಪಾಲನು ಹಾಯ್‌ ಕರಾವಳಿ ಪತ್ರಿಕೆಯ   ಹಳೆಯ ದಾಖಲೆಗಳನ್ನು ಬಳಸಿ ಇಲಾಖೆಗಳಿಗೆ ತಪ್ಪು ಹಾಗೂ ಸುಳ್ಳು ಮಾಹಿತಿಗಳನ್ನು ನೀಡಿ ಪತ್ರಿಕೆಯನ್ನು ಪ್ರಕಟಿಸುತ್ತಿದ್ದಾನೆ ಎಂದು ಆಶಾರವರು ಆರೋಪಿಸಿದ್ದಾರೆ.

ಅಲ್ಲದೇ ಸೋಶಿಯಲ್‌ ಮಾಧ್ಯಮದಲ್ಲಿ ನನ್ನ ಹಾಯ್‌ ಕರಾವಳಿ ಎಂಬ ಹೆಸರಿನಿಂದ ಯೂಟ್ಯೂಬ್‌ ಮತ್ತು ನ್ಯೂಸ್‌ ವೆಬ್‌ ಸೈಟ್‌ ಅನ್ನು ಅಭಿವೃದ್ಧಿ ಪಡಿಸಿ ಪತ್ರಿಕೆಯನ್ನು ದುರುಪಯೋಗ ಪಡಿಸಿಕೊಂಡು ಕಲ್ಲುಕೋರೆ, ಮರಳುದಂದೆ ಹಾಗು ಇತರರಿಗೆ ಬೆದರಿಕೆ ಹಾಕಿ ಹಣಪಡೆದು ಆಶಾರವರ ಗಂಡನ ಹೆಸರು ಹಾಗೂ ಪತ್ರಿಕೆಯ ಹೆಸರನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಅಲ್ಲದೇ ತನ್ನ ನಕಲಿ ಪತ್ರಿಕೆಯ ಹೆಸರಿನಲ್ಲಿ ಜಾಹೀರಾತುಗಳಿಂದ ಹಣವನ್ನು ಪಡೆದುಕೊಂಡು ವಂಚನೆ ಮಾಡಿರುತ್ತಾರೆ ಎಂದು ದೂರಿದ್ದಾರೆ.

ದಿನಾಂಕ 26/12/2023 ರಂದು ಆರೋಪಿ ವಿ.ಗೋಪಾಲ ಮತ್ತು ಇನ್ನೊಬ್ಬ ಆರೋಪಿ ಸತೀಶ್‌  ಹಾಗೂ ಇತರರು ಉಡುಪಿ ಪ್ರೆಸ್‌ ಕ್ಲಬ್‌ ನಲ್ಲಿ ಮತ್ತೆ ಪತ್ರಿಕಾಗೋಷ್ಠಿ ನಡೆಸಿ ಆಶಾರವರು ಹಾಗೂ ಅವರ ಗಂಡ ಮತ್ತು ಪತ್ರಿಕೆಯ ಬಗ್ಗೆ ಸುಳ್ಳು ಮಾಹಿತಿ, ಅಲ್ಲಸಲ್ಲದ ಅಪವಾದ ಮಾಡಿ ಮಾನಹಾನಿ ಹಾಗೂ ತೇಜೊವಧೆ ಮಾಡಿರುತ್ತಾರೆ ಎಂದು ದೂರಿದ್ದಾರೆ. ಅಲ್ಲದೇ ಮತ್ತೊಬ್ಬ ಆರೋಪಿ ಗಣೇಶ್‌ ಎಂಬವ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದ ವಿಷಯವನ್ನು ಫೇಸ್‌ ಬುಕ್‌ ನಲ್ಲಿ ಬರೆದು ವಿ.ಗೋಪಾಲ ಮತ್ತು ಸತೀಶ್ ಜೊತೆ ಸೇರಿ ಆಶಾರವರ ಗಂಡನಿಗೆ ಬೆದರಿಕೆ ಹಾಕಿ ಕೊಂಕಣಿಯಲ್ಲಿ ಬರೆದು ಮಾನಹಾನಿ ಮಾಡಿದ್ದು ಅಲ್ಲದೇ ದಿನಾಂಕ 27.12.2023 ರಂದು ಆರೋಪಿ ವಿ.ಗೋಪಾಲ ಹಾಗೂ ಇತರರ ಪ್ರಚೋದನೆಯಿಂದ ಸುಳ್ಳುವರದಿ ಮಾಡಿ ಆಶಾರವರ ಸಂಸ್ಥೆಯ ಹೆಸರನ್ನು ಸಾರ್ವಜನಿಕ ವಲಯದಲ್ಲಿ ಹಾಳು ಮಾಡಿ ಸಾಕಷ್ಟು ವ್ಯಾವಹಾರಿಕ ನಷ್ಟಮಾಡಿರುತ್ತಾರೆ ಎಂದು ಆಶಾರವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ : ಕಲಂ  420, 465, 471, 504, 506 R/W 34 IPC  ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

error: No Copying!