Spread the love

ಮಲ್ಪೆ: ದಿನಾಂಕ:28-12-2023(ಹಾಯ್ ಉಡುಪಿ ನ್ಯೂಸ್) ಬೀಚ್ ನಲ್ಲಿ ಅಪಾಯಕಾರಿಯಾಗಿ ಕಾರು ಚಲಾಯಿಸಿದ ಮೂವರು ಯುವಕರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ 27/12/2023 ರಂದು ಸಂಜೆ ಪಡುಕೆರೆಯ ಬೀಚ್ ನಲ್ಲಿ ವಾಹನ ಸಂಚಾರ ನಿಷೇದಿಸಿರುವ ಸ್ಥಳದಲ್ಲಿ ಒಂದು ಕಾರಿನಲ್ಲಿ 3 ಜನ ಕುಳಿತುಕೊಂಡು ಕಾರನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸುತ್ತಿದ್ದಾರೆ ಎಂದು ಸಾರ್ವಜನಿಕರು ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಕಾರನ್ನು ಆ 3 ಜನ ಪ್ರವಾಸಿಗರು ಸಮುದ್ರ ಬೀಚ್ ನ ಮರಳಿನಲ್ಲಿ ಚಲಾಯಿಸಿದ ಕಾರಣ ಕಾರಿನ ಟಯರ್ ಸಮುದ್ರದ ಹೊಯಿಗೆಯಲ್ಲಿ ಹೂತು ಹೋಗಿರುತ್ತದೆ.  ಕಾರಿನ ನಂಬ್ರ KL-18-W- 4664 ನೇ  ಕೆಂಪು ಬಣ್ಣದ ರೆನಾಲ್ಟ್ ಕಂಪೆನಿಯ ಕಾರು ಆಗಿರುತ್ತದೆ. ಪೊಲೀಸರು ಕಾರಿನಲ್ಲಿ ಇದ್ದ 3 ಜನ ಕೇರಳದ ಪ್ರವಾಸಿಗರ ಹೆಸರು ವಿಳಾಸ ವಿಚಾರಿಸಿದಾಗ ಮಣಿಕಂಠ, ಅಯ್ಯಪ್ಪನ್, ಬಾಲಮುರುಗನ್ ಎಂದು ತಿಳಿಸಿರುತ್ತಾರೆ ಎನ್ನಲಾಗಿದೆ. 

3 ಜನರು ತಮ್ಮ ಪ್ರಾಣಕ್ಕೆ ಕುತ್ತಾಗುತ್ತದೆ ಎಂದು ತಿಳಿದರೂ KL-18-W-4664   ನೇ   ಕಾರನ್ನು ಪಡುಕೆರೆಯ ಬೀಚಿನಲ್ಲಿ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಪರಿಸರದ ಜನರಿಗೆ ತೊಂದರೆ ಉಂಟು ಮಾಡಿರುತ್ತಾರೆ ಎಂದು ದೂರು ದಾಖಲಾಗಿದೆ. 

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಕಲಂ: 279, 308 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!