
ಕುಂದಾಫುರ: ದಿನಾಂಕ: 25/12/2023 (ಹಾಯ್ ಉಡುಪಿ ನ್ಯೂಸ್) ನೇರಳಕಟ್ಟೆ ಬಳಿಯ ಸರ್ಕಾರಿ ಹಾಡಿಯಲ್ಲಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದ ನಾಲ್ವರನ್ನು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನೂತನ್.ಡಿ.ಅವರು ಬಂಧಿಸಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನೂತನ್ .ಡಿ. ಅವರಿಗೆ ದಿನಾಂಕ :24-12-2023ರಂದು ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ನೇರಳ ಕಟ್ಟೆ ಬಳಿಯ ಜಾಡ್ಕಟ್ಟು ಸರ್ಕಾರಿ ಹಾಡಿಯಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದಾರೆಂದು ಸಾರ್ವಜನಿಕರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಕೂಡಲೇ ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ತಲುಪಿ ಮರೆಯಲ್ಲಿ ನಿಂತು ನೋಡಿದಾಗ 4 ಜನರು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಇಸ್ಪೀಟ್ ಆಟ ಆಡುತ್ತಿದ್ದಲ್ಲಿಗೆ ದಾಳಿ ನಡೆಸಿ 4 ಜನರನ್ನು ಸಿಬ್ಬಂದಿಯವರ ಸಹಾಯದಿಂದ ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ನಾಲ್ವರು ಆರೋಪಿಗಳು ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ್ದ ನಗದು ರೂಪಾಯಿ 2,200/-, 2) ನೀಲಿ ಬಣ್ಣದ ಪ್ಲಾಸ್ಟಿಕ್ -01, 3) 52 ಇಸ್ಪೀಟ್ ಎಲೆಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಕುಂದಾಫುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 87 ಕೆ.ಪಿ ಆ್ಯಕ್ಟ್ರಂತೆ ಪ್ರಕರಣ ದಾಖಲಾಗಿದೆ.