ಮಣಿಪಾಲ: ದಿನಾಂಕ: 25-12-2023(ಹಾಯ್ ಉಡುಪಿ ನ್ಯೂಸ್) ಪರಿಶಿಷ್ಟ ಜಾತಿ ಪಂಗಡದ ನಿಗಮದಿಂದ ಸಾಲ ಪಡೆದು ತನಗೆ ನೀಡಲಿಲ್ಲ ಎಂಬ ದ್ವೇಷ ದಿಂದ ಮಹಿಳೆಯೋರ್ವರ ಬಗ್ಗೆ ಸುಳ್ಳು ಮೆಸೇಜ್ ಹರಿಯಬಿಟ್ಟು ಮಾನ ಹಾನಿ ಮಾಡಿದ್ದಾನೆ ಎಂದು ವ್ಯಕ್ತಿ ಯೋರ್ವನ ಮೇಲೆ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಉಡುಪಿ ನಿವಾಸಿ ಮುಕ್ತ (50) ಎಂಬವರು ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಸದಸ್ಯೆಯಾಗಿದ್ದು ಪರಿಶಿಷ್ಟ ಪಂಗಡದವರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಆರೋಪಿ ಪ್ರಭಾಕರ ಎಂಬವನು ಕೂಡಾ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಸದಸ್ಯನಾಗಿದ್ದು ಆರೋಪಿ ಪ್ರಭಾಕರ ನು ಮುಕ್ತ ರವರಲ್ಲಿ ಅವರ ಪರಿಶಿಷ್ಟ ಜಾತಿ ನಿಗಮದಿಂದ ಸಾಲ ಪಡೆದು ನೀಡುವಂತೆ ಒತ್ತಾಯಿಸುತ್ತಿದ್ದನು ಎಂದಿದ್ದಾರೆ .
ಮುಕ್ತರವರು ಅದಕ್ಕೆ ನಿರಾಕರಿಸಿರುತ್ತಾರೆ ಎಂದಿದ್ದಾರೆ. ಈ ದ್ವೇಷದಿಂದ ಆರೋಪಿ ಪ್ರಭಾಕರನು ಮುಕ್ತರವರ ನಡತೆಯ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಪ್ರಚಾರ ಮಾಡುತ್ತಿದ್ದು, ದಿನಾಂಕ 18/12/2023 ರಂದು ಮುಕ್ತರವರು ಅವರ ಮನೆಯಲ್ಲಿರುವಾಗ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ಸದಸ್ಯೆ ಜ್ಯೋತಿ ಗಿರೀಶ್ ಎಂಬವರು ಮುಕ್ತ ರವರಿಗೆ ಕರೆ ಮಾಡಿ ಅವರ ಮೊಬೈಲ್ ಪೋನ್‌ಗೆ ಪ್ರಭಾಕರನು ಮುಕ್ತರವರ ಬಗ್ಗೆ ಅವಹೇಳನಕಾರಿ ವಾಯ್ಸ್ ಮೆಸೇಜ್ ಕಳುಹಿಸಿದ ಬಗ್ಗೆ ತಿಳಿಸಿದ್ದಾರೆ ಎಂದಿದ್ದಾರೆ.
ಪ್ರಭಾಕರನು ಕಳುಹಿಸಿದ ಮೆಸೇಜ್‌ಗಳನ್ನು ಜ್ಯೋತಿ ಗಿರೀಶ್ ರವರು ಮುಕ್ತರವರ ಮೊಬೈಲ್‌ಗೆ ಕಳುಹಿಸಿದ್ದು ಆ ವಾಯ್ಸ್ ಮೆಸೇಜ್‌ನಲ್ಲಿ ಮುಕ್ತ ರವರ ಮಾನಕ್ಕೆ ಕುಂದು ಬರುವಂತಹ ಅವಾಚ್ಯ ಮಾತುಗಳು ಇದ್ದು, ಅಲ್ಲದೆ ಮುಕ್ತ ರವರ ಮನೆಗೆ ಬೆಂಕಿ ಹಾಕುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾನೆ ಎಂದು ಮುಕ್ತ ರವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ 509, 504, 506 IPC ಮತ್ತುಕಲಂ 3(1)(Zb), 3(2)(va) Prevetion of SC.ST. Attracity Act 1989 ರಂತೆ ಪ್ರಕರಣ ದಾಖಲಾಗಿದೆ.