ಅಮಾಸೆಬೈಲು: ದಿನಾಂಕ :25-12-2023(ಹಾಯ್ ಉಡುಪಿ ನ್ಯೂಸ್) ಕೆಲಾ ಹೆಗ್ಗೋಡು ಎಂಬಲ್ಲಿನ ಸಾರ್ವಜನಿಕ ಹಾಡಿಯಲ್ಲಿ ಕೋಳಿ ಅಂಕ ನಡೆಸುತ್ತಿದ್ದ ನಾಲ್ವರನ್ನು ಅಮಾಸೆಬೈಲು ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಸೌಮ್ಯಾ ಜೆ ಅವರು ಬಂಧಿಸಿದ್ದಾರೆ.
ಅಮಾಸೆಬೈಲು ಪೊಲೀಸ್ ಠಾಣೆ ಪಿಎಸ್ಐ ಯವರಾದ ಸೌಮ್ಯಾ ಜೆ ಅವರಿಗೆ ದಿನಾಂಕ 23-12-2023 ರಂದು ಅಮಾಸೆಬೈಲು ಗ್ರಾಮದ ಬೀಟು ಸಿಬ್ಬಂದಿ ಸಂಪತ್ ರವರು ಕರೆ ಮಾಡಿ ಕುಂದಾಪುರ ತಾಲೂಕು ಅಮಾಸೆಬೈಲು ಗ್ರಾಮದ ಕೆಲಾ ಹೆಗ್ಗೋಡ್ಲು ಎಂಬಲ್ಲಿ ಸಾರ್ವಜನಿಕ ಹಾಡಿಯಲ್ಲಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ಧಾಳಿ ನಡೆಸಿ ಅಲ್ಲಿ ಕೋಳಿ ಅಂಕ ನಡೆಸುತ್ತಿದ್ದ 1} ರವೀಂದ್ರ 2} ರತ್ನಾಕರ , 3} ಆನಂದ 4} ರಾಘವೇಂದ್ರ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದು ಕೋಳಿ ಅಂಕ ಜುಗಾರಿ ಆಟಕ್ಕೆ ಬಳಸಿದ ಹುಂಜ ಕೋಳಿ – 4 ( ಅಂದಾಜು ಮೌಲ್ಯ 2,600 ರೂಪಾಯಿ) ಕೋಳಿ ಬಾಳು – 2 ಹಾಗೂ ಕೋಳಿಯ ಕಾಲಿಗೆ ಕೋಳಿ ಬಾಳನ್ನು ಕಟ್ಟಲು ಉಪಯೋಗಿಸಿದ ಹಗ್ಗ – 2 ಹಾಗೂ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿದ ನಗದು ಹಣ ರೂ 810/- ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ರೂ 3,410/ ಆಗಿರುತ್ತದೆ ಎನ್ನಲಾಗಿದೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಕಲಂ 11 (1) (ಎ) ಪ್ರಾಣಿ ಹಿಂಸೆ ನಿಷೇಧ ಕಾಯ್ದೆ 1960 ಹಾಗೂ ಕಲಂ 87,93 ಕರ್ನಾಟಕ ಪೊಲೀಸು ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.