ಗಂಗೊಳ್ಳಿ: ದಿನಾಂಕ 22/12/2023 (ಹಾಯ್ ಉಡುಪಿ ನ್ಯೂಸ್) ಗಂಗೊಳ್ಳಿ ಗ್ರಾಮದ ದಾಕುಹಿತ್ಲುವಿನ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಐವರನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ (ಕಾ&ಸು) ಹರೀಶ್ ಆರ್ ರವರು ಬಂಧಿಸಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಹರೀಶ್ ಆರ್ ಅವರು ದಿನಾಂಕ: 21-12-2023ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಗಂಗೊಳ್ಳಿ ಗ್ರಾಮದ ದಾಕುಹಿತ್ಲುವಿನ ಬಳಿ ಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ನಡೆಯುತ್ತಿರುವ ಬಗ್ಗೆ ಗುಪ್ತ ಮಾಹಿತಿ ಬಂದ ಮೇರೆಗೆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿ ಅಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆಪಾದಿತರಾದ 1. ಮಿಥುನ್, 2. ರವಿ , 3. ವಿಕ್ರಂ, 4. ಗಣಪತಿ, 5. ಅಣ್ಣಪ್ಪ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದಿದ್ದು ಓರ್ವ ವ್ಯಕ್ತಿ ಓಡಿ ಹೋಗಿದ್ದು ಬಂಧಿತರಿಂದ ಆತನ ಹೆಸರು ವಿಚಾರಿಸಿದಾಗ ವಿಜೇತ ಎಂಬುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಬಂಧಿತರು ಕೃತ್ಯಕ್ಕೆ ಬಳಸಿದ ನಗದು 2,850 /- ರೂಪಾಯಿ, ಇಸ್ಪೀಟ್ ಎಲೆಗಳು , ಪ್ಲಾಸ್ಟಿಕ್ ಶೀಟನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ .
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ: 87 ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.