ಉಡುಪಿ: ದಿನಾಂಕ 22/12/2023 (ಹಾಯ್ ಉಡುಪಿ ನ್ಯೂಸ್) ಅಂಬಲಪಾಡಿ ಪರಿಸರದಲ್ಲಿ ಪೂರ್ವಾನುಮತಿ ಇಲ್ಲದೆ ತಡ ರಾತ್ರಿ ಯವರೆಗೂ ಕರ್ಕಶ ಡಿಜೆ ಬಳಸಿದ ನಾಲ್ವರ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ತಾರನಾಥ ರವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣೆ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ತಾರನಾಥ ಅವರು ದಿನಾಂಕ 20-12-2023ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿಯ ಅಂಬಲಪಾಡಿ ಗ್ರಾಮದ ಪ್ರಜ್ವಲ್ ನಗರದ ಪಲ್ಲಕ್ಕಿ ರೈಸ್ ಮಿಲ್ ಪರಿಸರದಲ್ಲಿ ಅತೀ ಕರ್ಕಶವಾದ ಶಬ್ದ ಕೇಳಿಸಿದ ಮೇರೆಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಆರೋಪಿ ಪ್ರಿತೇಶ್ ಎಂಬವರು ಯಾವುದೇ ಪೂರ್ವಾನುಮತಿ ಅಥವಾ ಪರವಾನಿಗೆಯನ್ನು ಪಡೆಯದೇ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಕಾರ್ಯಕ್ರಮದಲ್ಲಿ ಉಪಯೋಗಿಸಿದ ಡಿ.ಜೆ./ಧ್ವನಿವರ್ಧಕದ ಮಾಲೀಕರಾದ ಶರತ್ ಹಾಗೂ ಲೈಟ್ಸ್-ಸೌಂಡ್ಸ್ ನ ಸಿಬ್ಬಂದಿಗಳಾದ ದಿಲೀಪ್, ರಂಜಿತ್ ಮತ್ತು ಯತೀನ್ ಪೂಜಾರಿ ಇವರು ಯಾವುದೇ ಪರವಾನಿಗೆಯಿಲ್ಲದೇ ಧ್ವನಿವರ್ಧಕವನ್ನು ಅತೀ ಕರ್ಕಶವಾಗಿ ಸಾರ್ವಜನಿಕರಿಗೆ ಉಪದ್ರವಾಗುವ ರೀತಿ ತಡರಾತ್ರಿಯವರೆಗೂ ಬಳಸಿದ್ದರಿಂದ ಸ್ವೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿರುತ್ತಾರೆ .
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 109 KP Act ಮತ್ತು 290 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.