ಬ್ರಹ್ಮಾವರ: ದಿನಾಂಕ:22-12-2023(ಹಾಯ್ ಉಡುಪಿ ನ್ಯೂಸ್) ಬ್ರಹ್ಮಾವರ ಮಹೇಶ್ ಆಸ್ಪತ್ರೆ ಗೆ ಅಪಘಾತದಿಂದ ಗಾಯಗೊಂಡು ಚಿಕಿತ್ಸೆ ಗೆಂದು ಬಂದ ಯುವಕರೀರ್ವರು ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ರಹ್ಮಾವರ ಮಹೇಶ್ ಆಸ್ಪತ್ರೆಯ ಮಾಲಕರು ಮತ್ತು ಮೆಡಿಕಲ್ ಡೈರೆಕ್ಟರ್ ಆಗಿರುವ ಡಾ.ರಾಕೇಶ್ (52) ಎಂಬವರು ದಿನಾಂಕ 21.12.2023 ರಂದು ಸಂಜೆ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯದಲ್ಲಿರುವಾಗ ಆಸ್ಪತ್ರೆ ಎದುರಿನ ರಾ.ಹೆ 66 ರಲ್ಲಿ ದ್ವಿಚಕ್ರ ವಾಹನ ಅಪಘಾತಗೊಂಡ ಕಾರಣ ಹೇಳಿ ಇಬ್ಬರು ಯುವಕರು ತುರ್ತು ಚಿಕಿತ್ಸಾ ವಿಭಾಗಕ್ಕೆ ಬಂದಿದ್ದರು ಎನ್ನಲಾಗಿದೆ.
ಕರ್ತವ್ಯದಲ್ಲಿದ್ದ ವೈಧ್ಯರು ಪರಿಕ್ಷೀಸಿದಾಗ ಒಬ್ಬನ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ತಪಾಸಣೆ ಮಾಡುವಾಗ ತಪಾಸಣೆಯನ್ನು ನಿರಾಕರಿಸಿ ತುರ್ತು ಚಿಕಿತ್ಸಾ ವಿಭಾಗದಿಂದ ಹೊರ ಹೋಗಿರುತ್ತಾರೆ ಎಂದಿದ್ದಾರೆ.
ನಂತರ ಪುನಃ ಆ ಯುವಕರು ಸಂಜೆ 7:00 ಗಂಟೆಗೆ ತುರ್ತು ಚಿಕಿತ್ಸಾ ವಿಭಾಗಕ್ಕೆ ವಾಪಾಸ್ಸು ಬಂದು ಕರ್ತವ್ಯದಲ್ಲಿದ್ದ ವೈದ್ಯರಿಗೆ ಪುನಃ ಚಿಕಿತ್ಸೆ ನೀಡುವಂತೆ ತಿಳಿಸಿದ ಮೇರೆಗೆ ಡಾ.ರಾಕೇಶ್ ರವರು ಚಿಕಿತ್ಸೆ ನೀಡುವ ಹಂತದಲ್ಲಿ ಗಾಯಳುವಿನ ಜೊತೆಯಲ್ಲಿದ್ದ ಆರೋಪಿಗೆ ತುರ್ತು ಚಿಕಿತ್ಸಾ ವಿಭಾಗದಿಂದ ಹೊರ ಹೋಗುವಂತೆ ವಿನಂತಿಸಿದ್ದಾರೆ ಎಂದಿದ್ದಾರೆ. ಆಗ ಆತನು ತುರ್ತು ಚಿಕಿತ್ಸಾ ವಿಭಾಗದ ಬಾಗಿಲನ್ನು ಒತ್ತಾಯದಿಂದ ದೂಡಿ, ಕರ್ತವ್ಯದಲ್ಲಿದ್ದ ಡಾ.ರಾಕೇಶ್ ರವರಿಗೆ ಚಿಕಿತ್ಸೆ ನೀಡುವಾಗ ಅಡ್ಡಿಪಡಿಸಿ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಲು ಪ್ರಾರಂಭಿಸಿದಾಗ ಡಾ.ರಾಕೇಶ್ ರವರು ಚಿತ್ರೀಕರಣ ಮಾಡುವುದು ಕಾನೂನು ಬಾಹಿರ, ಚಿತ್ರೀಕರಣ ಮಾಡಲು ಸಾಧ್ಯವಿಲ್ಲ ವೆಂದು ಆರೋಪಿಗೆ ಮನವರಿಕೆ ಮಾಡುತ್ತಿದ್ದ ವೇಳೆ ಕರ್ತವ್ಯದಲ್ಲಿದ್ದ ಡಾ.ರಾಕೇಶ್ ರವರಿಗೆ ಆರೋಪಿಯು ಕೈಯಿಂದ ಮುಖಕ್ಕೆ ಮತ್ತು ಕುತ್ತಿಗೆಗೆ ಹೊಡೆದು, ಚಿಕಿತ್ಸೆ ನೀಡದಂತೆ ತಡೆದು ಅಡ್ಡಿಪಡಿಸಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆಗ ಡಾ.ರಾಕೇಶ್ ರವರು ಆಸ್ಪತ್ರೆಯ ಸಿಬ್ಬಂದಿಗಳನ್ನು ಕರೆದಾಗ ಆರೋಪಿಯು ತುರ್ತು ಚಿಕತ್ಸಾ ವಿಭಾಗದಿಂದ ನಿರ್ಗಮಿಸಿರುತ್ತಾನೆ ಎಂದಿದ್ದಾರೆ .ಬಳಿಕ ಗಾಯಾಳು ಸಹ ವೈಧ್ಯರ ಅನುಮತಿ ಇಲ್ಲದೇ ನಿರ್ಗಮಿಸಿರುತ್ತಾನೆ ಎಂದಿದ್ದಾರೆ.
ನಂತರ ಆರೋಪಿಯು ಆಸ್ಪತ್ರೆಯ ಹೊರಗಡೆ ಪಾರ್ಕ್ ಮಾಡಿದ್ದ KA.20.HB.8666 ನೇ ಮೋಟಾರ್ ಸೈಕಲ್ ನಲ್ಲಿ ಹೋಗುವಾಗ ಡಾ.ರಾಕೇಶ್ ರವರಿಗೆ ಅವಾಚ್ಯವಾಗಿ ಬೈದು , ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ 323, 341, 504, 506 ಐಪಿಸಿ & 3, 4 The Karnataka Prohibition of Violence against Medicare Service Personnel And Damage to Property in Med icare Service Institutions Act 2009 ರಂತೆ ಪ್ರಕರಣ ದಾಖಲಾಗಿದೆ.