ಪಡುಬಿದ್ರಿ: ದಿನಾಂಕ 14/12/2023 (ಹಾಯ್ ಉಡುಪಿ ನ್ಯೂಸ್) ನಂದಿಕೂರು ಕಡೆಯಿಂದ ಪಡುಬಿದ್ರಿ ಕಡೆಗೆ ಮರಳು ಕಳ್ಳ ಸಾಗಣೆ ಮಾಡುತ್ತಿದ್ದ ಟಿಪ್ಪರ್ ಚಾಲಕನನ್ನು ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರಸನ್ನ ಎಂ ಎಸ್ ಅವರು ಬಂಧಿಸಿದ್ದಾರೆ.
ಪಡುಬಿದ್ರಿ ಪೊಲೀಸ್‌ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಪ್ರಸನ್ನ ಎಂ ಎಸ್ ಅವರು ದಿನಾಂಕ :13-12-2023ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ನಂದಿಕೂರು ಕಡೆಯಿಂದ ಪಡುಬಿದ್ರಿ ಕಡೆಗೆ ಬರುತ್ತಿದ್ದ KA-19-AD-4490 ನೇ ಟಿಪ್ಪರ್ ಲಾರಿಯಲ್ಲಿ ನೀರು ಸೋರುತ್ತಿದ್ದರಿಂದ ಮರಳು ಸಾಗಿಸುತ್ತಿರುವುದಾಗಿ ಅನುಮಾನಗೊಂಡು, ಪಡುಬಿದ್ರಿಯ ಕಾರ್ಕಳ ಜಂಕ್ಷನ್ ಬಳಿ ಟಿಪ್ಪರ್ ಲಾರಿಯನ್ನು ನಿಲ್ಲಿಸಿ ಟಿಪ್ಪರ್ ಲಾರಿಯ ಚಾಲಕ ಸರ್ಫ್ರಾಜ್ ಎಂಬಾತನನ್ನು ವಿಚಾರಣೆ ನಡೆಸಿದಾಗ ಟಿಪ್ಪರ್ ಲಾರಿಯ ಮಾಲಿಕರಾದ ಗುರುಪುರದ ರಾಜೇಶ ಎಂಬಾತ ಸರ್ಫ್ರಾಜ್ ಮನೆಯ ಬಳಿ ಮರುಳು ತುಂಬಿದ ಈ ಲಾರಿಯನ್ನು ತಂದು ನಿಲ್ಲಿಸಿ ತನಗೆ ತುರ್ತು ಕೆಲಸ ಇದ್ದು, ಈ ಮರಳನ್ನು ಪಡುಬಿದ್ರಿಯ ಬೀಚ್ ಬಳಿ ತೆಗೆದುಕೊಂಡು ಹೋಗುವಂತೆ ತಿಳಿಸಿ ಕಳುಹಿಸಿ ಕೊಟ್ಟಿರುವುದಾಗಿ ತಿಳಿಸಿರುತ್ತಾನೆ ಎನ್ನಲಾಗಿದೆ .
ನಂತರ ಟಿಪ್ಪರ್ ಲಾರಿಯನ್ನು ಪೊಲೀಸರು ಪರಿಶೀಲಿಸಿದಾಗ ಲಾರಿಯಲ್ಲಿ ಅಕ್ರಮವಾಗಿ 3 ಯೂನಿಟ್ ನಷ್ಟು ಮರಳು ತುಂಬಿಸಿ ಹಸಿರು ಟರ್ಪಾಲ್ ಹೊದಿಸಿರುತ್ತದೆ ಎನ್ನಲಾಗಿದೆ. ಚಾಲಕನ ಬಳಿ ಮರಳುಗಾರಿಕೆ ಬಗ್ಗೆ ಪರ್ಮಿಟ್ ಆಗಲಿ, ಪರವಾನಿಗೆ ಆಗಲಿ ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳು ಇರುವುದಿಲ್ಲ. ಟಿಪ್ಪರ್ ಲಾರಿಯ ಮಾಲಕ ಗುರುಪುರದ ರಾಜೇಶ ಎಲ್ಲಿಂದಲೋ ಅಕ್ರಮವಾಗಿ ಕಳವು ಮಾಡಿದ ಮರಳನ್ನು ಯಾವುದೇ ಪರವಾನಗಿ ಇಲ್ಲದೇ ತುಂಬಿಸಿಕೊಂಡು ಬಂದು ಖಾಲಿ ಮಾಡಿ ಬರುವಂತೆ ಚಾಲಕನಿಗೆ ನೀಡಿ ಸಾಗಿಸುತ್ತಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 379 ಜೊತೆಗೆ 34 ಐಪಿಸಿ ಮತ್ತು ಕಲಂ: 66 ಜೊತೆಗೆ 192 (ಎ) ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ .