ಬೈಂದೂರು: ದಿನಾಂಕ: 14/12/2023 (ಹಾಯ್ ಉಡುಪಿ ನ್ಯೂಸ್) ಉಪ್ಪುಂದ ಗ್ರಾಮದ ಸರಕಾರಿ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಏಳು ಜನರನ್ನು ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ತಿಮ್ಮೇಶ್ ಬಿ ಎನ್ ಅವರು ಬಂಧಿಸಿದ್ದಾರೆ.
ಬೈಂದೂರು ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ್ ಬಿ ಎನ್ ಅವರಿಗೆ ದಿನಾಂಕ:13-12-2023 ರಂದು ಉಪ್ಪುಂದ ಪೂರ್ಣಿಮ ಬಾರ್ & ರೆಸ್ಟೋರೆಂಟ್ ಹಿಂಭಾಗದ ಸರಕಾರಿ ಖಾಲಿ ಜಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಾ ಇಸ್ಪೀಟು ಜುಗಾರಿ ಆಟ ಆಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿರುತ್ತದೆ.
ದೊರೆತ ಮಾಹಿತಿಯ ಮೇರೆಗೆ ಕೂಡಲೇ ದಾಳಿ ನಡೆಸಿ ಮದ್ಯಪಾನ ಮಾಡುತ್ತಾ ಹಣವನ್ನು ಪಣವಾಗಿ ಕಟ್ಟಿ ಇಸ್ಪೀಟು ಜುಗಾರಿ ಆಡುತ್ತಿದ್ದ ಆಪಾದಿತರಾದ 1) ಕಾಶಿನಾಥ್, 2) ಲಕ್ಷ್ಮಣ, 3) ಕೃಷ್ಣ, 4) ರಾಜೇಂದ್ರ, 5) ವಿಶ್ವನಾಥ, 6) ಗಣೇಶ , 7) ರಾಮ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದು ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ 1,440/- ರೂಪಾಯಿ, ವಿವಿಧ ಇಸ್ಪೀಟ್ ಎಲೆಗಳು ಹಾಗೂ ನೆಲಕ್ಕೆ ಹಾಸಿದ ಹಳೆಯ ನ್ಯೂಸ್ ಪೇಪರ್-1 ಮತ್ತು ಮಧ್ಯಪಾನ ಮಾಡಿ ಬಿಸಾಡಿದ ಖಾಲಿ ಮಧ್ಯದ ಪ್ಯಾಕೇಟ್ , ಪ್ಲಾಸ್ಟಿಕ್ ಗ್ಲಾಸು ಹಾಗೂ ನೀರಿನ ಖಾಲಿ ಪ್ಲಾಸ್ಟಿಕ್ ಬಾಟಲಿಯನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ .
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 15 (A) K E Act , ಮತ್ತು ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿದೆ.