Spread the love
  • ಕಾರ್ಕಳ: ದಿನಾಂಕ:14-12-2023(ಹಾಯ್ ಉಡುಪಿ ನ್ಯೂಸ್) ಗುಂಡ್ಯಡ್ಕ ದ ಕ್ರಶರ್ ನಲ್ಲಿ ಬೈಕ್ ನಲ್ಲಿ ಬಂದ ನಾಲ್ವರು ಕಳ್ಳತನ ನಡೆಸಿದ್ದಾರೆ ಎಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
  • ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಗುಂಡ್ಯಡ್ಕದಲ್ಲಿರುವ ಶ್ರೀ ಮಹಾಗಣಪತಿ ಕ್ರಶರ್‌ ನಲ್ಲಿ ದಿನಾಂಕ 13/12/2023 ರಂದು ರಾತ್ರಿ ಆರೋಪಿಗಳಾದ ಸಂದೀಪ್‌, ದೀಪಕ್‌, ಸಂಕೇತ್‌,ರಕ್ಷಣ್ ಎಂಬವರು 2 ಬೈಕ್‌ ನಲ್ಲಿ ಬಂದು ಕ್ರಶರ್‌ ನಲ್ಲಿರುವ 37,500/- ರೂಪಾಯಿ ಮೌಲ್ಯದ ಕಬ್ಬಿಣದ ಜಾಬ್‌ ಪ್ಲೇಟ್‌, ಹಳೆ ಬ್ಯಾಟರಿ, ಕಬ್ಬಿಣದ ಬ್ರೇಕರ್‌ ಸೀಜಿರ್‌ ರನ್ನು ಕಳವು ಮಾಡಿರುತ್ತಾರೆ ಎಂದು ಜಯಂತ್‌ (50),  ಕುಕ್ಕುಂದೂರು ಕಾರ್ಕಳ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
  • ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಲಂ: 379  ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!