Spread the love

ಬೆಂಗಳೂರು: ದಿನಾಂಕ:08-12-2023(ಹಾಯ್ ಉಡುಪಿ ನ್ಯೂಸ್)

ಕನ್ನಡ ಚಿತ್ರರಂಗದ ಹಿರಿಯ ನಟಿ 85ವರ್ಷದ ಲೀಲಾವತಿ ಅವರು ಇಂದು ಸಂಜೆ ಕೊನೆ ಉಸಿರೆಳೆದರು.

ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಮ್ರತರಾದರು ಎಂದು ಪುತ್ರ ವಿನೋದ್ ರಾಜ್ ತಿಳಿಸಿದ್ದಾರೆ.

ಕನ್ನಡ,ತಮಿಳು, ತೆಲುಗಿನಲ್ಲಿ ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಲೀಲಾವತಿ ಯವರು ಅಭಿನಯಿಸಿದ್ದಾರೆ.

1958 ರಲ್ಲಿ ತೆರೆ ಕಂಡಿದ್ದ ಭಕ್ತ ಪ್ರಹ್ಲಾದ ಅವರ ಮೊದಲ ಚಿತ್ರ.ಈ ಸಿನಿಮಾದಲ್ಲಿ ಲೀಲಾವತಿಯವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.2009 ರಲ್ಲಿ ಬಿಡುಗಡೆಯಾದ ಯಾರದು? ಅವರ ಕೊನೆಯ ಚಿತ್ರವಾಗಿತ್ತು.

ಹಿರಿಯ ಮೇರು ನಟಿ ಲೀಲಾವತಿ ಅವರ ನಿಧನಕ್ಕೆ ಚಿತ್ರರಂಗ ಹಾಗೂ ಕನ್ನಡದ ಅವರ ಕೋಟ್ಯಾಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

error: No Copying!