ಉಡುಪಿ: ದಿನಾಂಕ:08-12-2023(ಹಾಯ್ ಉಡುಪಿ ನ್ಯೂಸ್)
ಸಾಕಾನೆ “ಅರ್ಜುನ” (60)ನ ಹತ್ಯೆ ಪ್ರಕರಣದ ಬಗ್ಗೆ ಹೈಕೋರ್ಟ್ ಮಧ್ಯಪ್ರವೇಶಿಸಿ ಸ್ವಯಂಸ್ಪೂರ್ತಿಯಿಂದ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಮತ್ತು ಸಾಕಾನೆಗಳ ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರಕ್ಕೆ ಸೂಕ್ತ ಆದೇಶ ಮಾಡಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ, ಮೂಡುಬೆಳ್ಳೆ ಅವರು ಒತ್ತಾಯಿಸಿದ್ದಾರೆ.