ಮಣಿಪಾಲ: ದಿನಾಂಕ :09-12-2023 (ಹಾಯ್ ಉಡುಪಿ ನ್ಯೂಸ್) ಈಶ್ವರ ನಗರದ ಅಡ್ಡ ಕೆಫೆ ಎಂಬಲ್ಲಿ ಪರವಾನಿಗೆ ಇಲ್ಲದೆ ಮದ್ಯಪಾನಕ್ಕೆ ಅವಕಾಶ ಒದಗಿಸುತ್ತಿದ್ದ ವ್ಯಕ್ತಿ ಯನ್ನು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ರಾಘವೇಂದ್ರ ಸಿ ಅವರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ ಸಿ ಅವರಿಗೆ ದಿನಾಂಕ: 08-12-2023 ರಂದು ಉಡುಪಿ ತಾಲೂಕು ಹೆರ್ಗಾ ಗ್ರಾಮದ ಈಶ್ವರ ನಗರದ ಮಣಿಪಾಲ – ಪರ್ಕಳ ರಾ ಹೆ 169 (ಎ) ರಲ್ಲಿರುವ ಶ್ರೀಕೃಷ್ಣಲೀಲಾ ಹೆಸರಿನ ಕಟ್ಟಡದ ಅಡ್ಡ ಕೆಫೆ ಎಂಬಲ್ಲಿ ರಕ್ಷಿತ್ ಎಂಬವರು ಸ್ಥಳದಲ್ಲಿ ಮದ್ಯಪಾನ ಸೇವಿಸಲು ಅನುಮತಿ ಇಲ್ಲದೇ ಇದ್ದರೂ ಸಹ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುತ್ತಾರೆ ಎಂದು ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ದಾಳಿ ನಡೆಸಿ ವ್ಯಕ್ತಿ ಯನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 15 (A) KE Act ರಂತೆ ಪ್ರಕರಣ ದಾಖಲಾಗಿದೆ.