Spread the love

ಉಡುಪಿ: ದಿನಾಂಕ: 06-12-2023( ಹಾಯ್ ಉಡುಪಿ ನ್ಯೂಸ್) ಕುತ್ಪಾಡಿ ನಿವಾಸಿಯೋರ್ವರ ಹಟ್ಟಿಯಲ್ಲಿದ್ದ ದನಗಳನ್ನು ಕದಿಯಲು ಕಳ್ಳರು ಯತ್ನಿಸಿದ್ದಾರೆಂದು ಫೆಲಿಕ್ಸ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ ಕುತ್ಪಾಡಿ ನಿವಾಸಿ ಫೆಲಿಕ್ಸ್ (53) ಎಂಬವರು ತನ್ನ ಮನೆಯ ತೋಟದಲ್ಲಿ ಹಸುಗಳನ್ನು ಕಟ್ಟಿದ್ದು , ದಿನಾಂಕ: 05/12/2023 ರಂದು ರಾತ್ರಿ 12-15 ಕ್ಕೆ ಮನೆಯ ತೋಟದಲ್ಲಿ ದೊಡ್ಡ ಸದ್ದು ಉಂಟಾದಾಗ ಎದ್ದು ಬಂದು ನೋಡಿದಾಗ ಮನೆಯ ತೋಟದ ಮುಂದೆ KA-21-B-6536 ನಂಬ್ರದ ಬೊಲೆರೋ ಪಿಕಪ್‌ ವಾಹನದ ಜೊತೆಗೆ 3 ರಿಂದ 4 ಜನ  ನಿಂತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಫೆಲಿಕ್ಸ್ ರನ್ನು ಕಂಡಾಕ್ಷಣ ಅಲ್ಲಿದ್ದವರು ವಾಹನ ಬಿಟ್ಟು ಓಡಿ ಹೋಗಿದ್ದು ವಾಹನದ ಒಳಗೆ ನೋಡಿದಾಗ ಫೆಲಿಕ್ಸ್ ರ ಒಂದು ದನ ವಾಹನದಲ್ಲಿದ್ದು ಯಾರೋ ಕಳ್ಳರು ದನವನ್ನು ಕಳವು ಮಾಡಲು ಪ್ರಯತ್ನಿಸಿರುತ್ತಾರೆ ಎಂದು ಫೆಲಿಕ್ಸ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 379,511  ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!