ಮಣಿಪಾಲ: ದಿನಾಂಕ: 17-11-2023 (ಹಾಯ್ ಉಡುಪಿ ನ್ಯೂಸ್) ಮಣಿಪಾಲದ ನಿವಾಸಿಯೊಬ್ಬರಿಗೆ ಮುಂಬಯಿ ಸಿ.ಬಿ.ಐ ಅಧಿಕಾರಿಗಳೆಂದು ನಂಬಿಸಿ ಇಪ್ಪತ್ತು ಲಕ್ಷ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಣಿಪಾಲ ನಿವಾಸಿ ಕೊಂಪೆಲ್ಲ ಲಕ್ಷ್ಮೀ ನಾರಾಯಣ ಎಂಬವರಿಗೆ ದಿನಾಂಕ: 16-11-2023 ರಂದು Skype App ಮೂಲಕ Mumbai.cbi.gov.in ನಿಂದ ಸಂದೀಪ್ ಮತ್ತು ಆಕಾಶ್ ಕುಲ್ಲಾರಿ ಎಂಬವರು ವೀಡಿಯೋ ಕರೆ ಮಾಡಿ ಮಾತನಾಡಿ ಮನಿ ಲಾಂಡ್ರಿಂಗ್ ಕೇಸ್‌ನಲ್ಲಿ ಕೊಂಪೆಲ್ಲ ಲಕ್ಷ್ಮೀ ನಾರಾಯಣರವರು ಒಳಗೊಂಡಿರುತ್ತಾರೆ ಎಂದು ತನಿಖೆ ನೆಪದಲ್ಲಿ ಬೆದರಿಸಿ ಕೊಂಪೆಲ್ಲ ಲಕ್ಷ್ಮೀ ನಾರಾಯಣರ ಬ್ಯಾಂಕ್ ಅಕೌಂಟ್ ಮಾಹಿತಿಯನ್ನು Skype App ಮೂಲಕ ಪಡಕೊಂಡು ಕೊಂಪೆಲ್ಲ ಲಕ್ಷ್ಮೀ ನಾರಾಯಣರ ಗಮನಕ್ಕೆ ಬಾರದೇ ಅವರ ICICI ಬ್ಯಾಂಕ್ ಖಾತೆಯಿಂದ ಒಟ್ಟು ರೂ. 19,78,700/- ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುತ್ತಾರೆ ಎಂದು ಕೊಂಪೆಲ್ಲ ಲಕ್ಷ್ಮೀ ನಾರಾಯಣರವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 66 (c) , 66 (D) IT Act and 419, 420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.