ಉಡುಪಿ: ದಿನಾಂಕ:14-11-2023(ಹಾಯ್ ಉಡುಪಿ ನ್ಯೂಸ್)
ಉಡುಪಿಯನ್ನು ಬೆಚ್ಚಿ ಬೀಳಿಸಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಕೊಲೆಗಾರನನ್ನು ಉಡುಪಿ ಪೊಲೀಸರು ಬೆಳಗಾವಿಯ ಕುಡುಚಿಯಲ್ಲಿ ಬಂಧಿಸಿದ್ದಾರೆ.
ನವೆಂಬರ್ 12ರಂದು ಉಡುಪಿಯ ಜನತೆಯನ್ನು ಬೆಚ್ಚಿ ಬೀಳಿಸಿದಂತಹ ಈ ಭೀಕರ ಅಮಾನವೀಯ ರೀತಿಯಲ್ಲಿ ಹತ್ಯೆ ನಡೆದಿತ್ತು. ನೇಜಾರಿನ ತ್ರಪ್ತಿ ಲೇಔಟ್ ನಲ್ಲಿರುವ ಹಸೀನಾ ರವರ ಮನೆಗೆ ಬಂದಿದ್ದ ಒಂಟಿ ಹಂತಕ ಎದುರು ಸಿಕ್ಕವರನ್ನೆಲ್ಲ ಹಸೀನಾ,ಅಪ್ನಾನ್ ,ಅಯ್ನಾಝ್,ಹಾಸೀಂ ಈ ನಾಲ್ವರನ್ನೂ ಅಮಾನವೀಯವಾಗಿ ಚೂರಿಯಿಂದ ಇರಿದು ಕೊಂದು ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ. ತಾಯಿ ಹಾಗೂ ಮೂವರು ಮಕ್ಕಳನ್ನು ಅಮಾನುಷ ವಾಗಿ ಕೊಂದ ಈ ಕೊಲೆ ಆರೋಪಿ ಯಾರೇ ಆಗಿದ್ದರೂ ಆತನನ್ನು ಕೂಡಲೇ ಬಂಧಿಸುವಂತೆ ಉಡುಪಿಯ ಜನತೆಯ ಆಗ್ರಹವಾಗಿತ್ತು.
ಉಡುಪಿ ಪೊಲೀಸ್ ಇಲಾಖೆಗೆ ಇದೊಂದು ಚಾಲೆಂಜಿಂಗ್ ಪ್ರಕರಣವಾಗಿದ್ದು ಆರೋಪಿಯನ್ನು ಕ್ಷಿಪ್ರ ಬಂಧಿಸುವುದು ಸವಾಲಾಗಿತ್ತು. ಸವಾಲನ್ನು ಸಮರ್ಥವಾಗಿ ಸ್ವೀಕರಿಸಿದ ಉಡುಪಿ ಪೊಲೀಸರು ಉಡುಪಿ ಎಸ್.ಪಿಯವರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರಿಸಿದ್ದು ಹಲವಾರು ಆಯಾಮಗಳಲ್ಲಿ ತನಿಖೆ ಮುಂದುವರಿಸಿ ಮೊಬೈಲ್ ಟವರ್ ಲೊಕೇಶನ್ ಮೂಲಕ ಕೊಲೆಗಾರನನ್ನು ಬೆಳಗಾವಿಯ ಕುಡುಚಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಗಾರ ಬೆಳಗಾವಿಯ ಕುಡುಚಿಯಲ್ಲಿ ಅವಿತಿರುವ ಬಗ್ಗೆ ಮೊಬೈಲ್ ಟವರ್ ಲೊಕೇಶನ್ ಮೂಲಕ ತಿಳಿದು ಕೊಂಡ ಉಡುಪಿ ಪೊಲೀಸರು ಕುಡುಚಿ ಪೊಲೀಸರಿಗೆ ಮಾಹಿತಿ ನೀಡಿದ್ದು ಕುಡುಚಿ ಪೊಲೀಸರು ಕುಡುಚಿಯ ನೀರಾವರಿ ಇಲಾಖೆಯ ಅಧಿಕಾರಿ ಪಾಟೀಲ್ ಎಂಬವರ ಮನೆಯಲ್ಲಿ ಅವಿತಿದ್ದ ಕೊಲೆಗಾರನನ್ನು ಬಂಧಿಸಿದ್ದಾರೆ.
ಕೊಲೆಗಾರ ಮಂಗಳೂರು ಏರ್ ಪೋರ್ಟ್ ನ ಸೆಕ್ಯೂರಿಟಿ ಸಿ ಆರ್ ಪಿ ಎಫ್ ಸಿಬ್ಬಂದಿ ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯವನಾದ ಪ್ರವೀಣ್ ಅರುಣ್ ಚೌಗಲೆ ಎಂಬವನಾಗಿದ್ದಾನೆ.
ಕೊಲೆಗೆ ಕಾರಣ ಅನೈತಿಕ ಸಂಬಂಧವೆಂದು ಆರೋಪಿಸಲಾಗುತ್ತಿದ್ದು ಕೊಲೆಯಾದ ಅಪ್ನಾನ್ ಏರ್ ಇಂಡಿಯಾ ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಕಾರಣವೇನೇ ಇರಲಿ ರಾಕ್ಷಸೀ ಕ್ರತ್ಯವೆಸಗಿದ ಕೊಲೆಗಾರನ ಬಂಧನವಾಗಿದೆ. ಆತನಿಗೆ ಕಠಿಣ ಶಿಕ್ಷೆಯಾಗ ಬೇಕೆಂಬುದು ಎಲ್ಲರ ಆಗ್ರಹವಾಗಿದೆ.