ಬೈಂದೂರು: ದಿನಾಂಕ: 14-11-2023 (ಹಾಯ್ ಉಡುಪಿ ನ್ಯೂಸ್) ಶಿರೂರು ಪರಿಸರದ ಪೇಂಟಿಂಗ್ ಶಾಪ್ ಅಂಗಡಿಯಲ್ಲಿ ಕಳ್ಳತನ ನಡಿದಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರೂರು ನಿವಾಸಿ ಗೋಪಾಲ (30) ಎಂಬವರು ನಂದೀಕೇಶ್ವರ ಪೇಂಟಿಂಗ್ ಶಾಪ್ ಎಂಬ ಅಂಗಡಿಯನ್ನು ಬಾಡಿಗೆಗೆ ಪಡೆದು ಎರಡು ಅಂಗಡಿಯಲ್ಲಿ ವ್ಯವಹಾರ ಮಾಡುತ್ತಿದ್ದಾರೆ ಎನ್ನಲಾಗಿದ್ದು ದಿನಾಂಕ 13/11/2023 ರಂದು ರಾತ್ರಿಯ ಅವಧಿಯಲ್ಲಿ ಯಾರೋ ಕಳ್ಳರು ಎರಡು ಅಂಗಡಿಯ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಅಂಗಡಿಯ ಒಳಗಿಟ್ಟಿದ್ದ ಹಾಗೂ ಪೇಂಟಿಂಗ್ ಮಾಡಲು ಇಟ್ಟಿದ್ದ ವಾಹನಗಳ ಒಟ್ಟು 53,000/- ರೂಪಾಯಿ ಮೌಲ್ಯದ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.