Spread the love

ಉಡುಪಿ: ದಿನಾಂಕ:15-11-2023 (ಹಾಯ್ ಉಡುಪಿ ನ್ಯೂಸ್)

ದಿನಾಂಕ 08-11-2023ರಂದು ಬನ್ನಂಜೆ ಯ ಜಯಲಕ್ಷ್ಮೀ ಸಿಲ್ಕ್ಸ್ ಕಟ್ಟಡದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಿಕ್ಷಾ ಪಾರ್ಕಿಂಗ್ ಬಗ್ಗೆ ನಡೆದ ವಾದ , ವಿವಾದದಲ್ಲಿ ಜಯಲಕ್ಷ್ಮೀ ಸಿಬ್ಬಂದಿ ರಿಕ್ಷಾ ಚಾಲಕ ರೋರ್ವರ ರಿಕ್ಷಾ ದ ಕೀಲಿಕೈಯನ್ನು ಕಸಿದು ಕೊಂಡು , ಬೈದು ಕಾನೂನನ್ನು ಕೈಗೆತ್ತಿಕೊಳ್ಳುವ ಮೂಲಕ ಬಡ ರಿಕ್ಷಾ ಚಾಲಕರಿಗೆ ಅನ್ಯಾಯವೆಸಗಲಾಗಿದೆ ಎಂದು ಆರೋಪಿಸಿ ಯಶೋಧ ಆಟೋ ಯೂನಿಯನ್ ನ ಸದಸ್ಯರು ಉಡುಪಿ ಯಲ್ಲಿ ಮೆರವಣಿಗೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯನ್ನು ಸಲ್ಲಿಸಿದ್ದಾರೆ.

ಯಶೋಧ ಆಟೋ ಯೂನಿಯನ್ ನ ಜಿಲ್ಲಾಧ್ಯಕ್ಷರಾದ ಕೆ.ಕ್ರಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ತಾಲೂಕು ಅಧ್ಯಕ್ಷ ರಾದ ದಿವಾಕರ ಪೂಜಾರಿ,ಶೇಖರ ಆಚಾರ್ಯ, ಶ್ರೀನಿವಾಸ ಕಪ್ಪೆಟ್ಟು, ಅರುಣ್ ಕನ್ಯಾನ ಮತ್ತಿತರರು ಉಪಸ್ಥಿತರಿದ್ದರು.

error: No Copying!